ಬಾಂಗ್ಲಾದೇಶ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಮೌನ ಏಕೆ? ಟಿಎಂಸಿ

ಕೋಲ್ಕತಾ: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ದುರ್ಗಾಪೂಜೆ ಹಬ್ಬದ ಸಮಯದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಗಳನ್ನು 'ಯೋಜಿತ ಸಂಚು' ಎಂದು ಕರೆದಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ವಿಷಯದಲ್ಲಿ ಪ್ರಧಾನಿ ಮೋದಿ 'ಮೌನವಹಿಸಿದ್ದನ್ನು' ಪ್ರಶ್ನಿಸಿದೆ.
ಬಂಗಾಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನ ಮಂತ್ರಿ ಬಾಂಗ್ಲಾ ದೇಶಕ್ಕೆ ಭೇಟಿ ನೀಡಿದ ಹಿಂದಿನ ಉದ್ದೇಶವನ್ನು ಪಕ್ಷವು ತನ್ನ ಮುಖವಾಣಿ 'ಜಾಗೊ ಬಾಂಗ್ಲಾ'ದಲ್ಲಿ ಪ್ರಶ್ನಿಸಿದೆ.
"ಮತದಾನದ ಸಮಯದಲ್ಲಿ ಗೌರವ ಸಲ್ಲಿಸಲು ಬಾಂಗ್ಲಾದೇಶಕ್ಕೆ ಹೋಗಿದ್ದ ಭಾರತದ ಪ್ರಧಾನಿಯು ಏಕೆ ಆರಂಭದಿಂದಲೂ ಮೌನಕ್ಕೆ ಶರಣಾದರು ಎಂದು ನಾವು ಆಶ್ಚರ್ಯ ಪಡುತ್ತೇವೆ. ಬಾಂಗ್ಲಾದೇಶದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಬಳಸಿಕೊಂಡು ಬಂಗಾಳದಲ್ಲಿ ಹಿಂದೂ ಭಾವನೆಗಳನ್ನು ಕೆರಳಿಸಲು ಪ್ರಧಾನಿ ಪ್ರಯತ್ನಿಸುತ್ತಿದ್ದಾರೆಯೇ? ಎಂದು ಅದು ಕೇಳಿದೆ.
Next Story