ಮೀಲಾದುನ್ನಬಿ ಪ್ರಯುಕ್ತ ವಿಕಲಚೇತನ ವಿದ್ಯಾರ್ಥಿಗೆ ಸೈಕಲ್ ವಿತರಿಸಿ ಸೌಹಾರ್ದ ಮೆರೆದ ದೊಡ್ಡಣಗುಡ್ಡೆ ಮಸೀದಿ

ಉಡುಪಿ, ಅ.19: ದೊಡ್ಡಣಗುಡ್ಡೆ ರಹ್ಮಾನಿಯ್ಯ ಜುಮಾ ಮಸೀದಿಯಲ್ಲಿ ಮಂಗಳವಾರ ನಡೆದ ಮೀಲಾದುನ್ನಬಿ ಪ್ರಯುಕ್ತ ದೊಡ್ಡಣಗುಡ್ಡೆ ಹೆಲ್ಪ್ ಡೆಸ್ಕ್ ಹಾಗೂ ರಿಫಾಯಿಯ್ಯ ಯಂಗ್ ಮೆನ್ಸ್ ವತಿಯಿಂದ ಪೆರಂಪಳ್ಳಿಯ ವಿಕಲಚೇತನ ವಿದ್ಯಾರ್ಥಿ ಸ್ವರೂಪ್‌ಗೆ ಸೈಕಲ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಸೀದಿ ಖತೀಬ್ ನಝೀರ್ ಅಹ್ಮದ್ ಸಅದಿ, ಅಧ್ಯಕ್ಷ ಹಾಜಿ ಕೆಎಸ್‌ಎಂ ಅಬ್ದುಲ್ ಖಾದರ್, ಯಂಗ್ ಮೆನ್ಸ್ ಅಧ್ಯಕ್ಷ ಮುಹಮ್ಮದ್ ರಫೀಕ್, ಹೆಲ್ಪ್ ಡೆಸ್ಕ್‌ನ ಸದಸ್ಯರುಗಳು, ಕಮಿಟಿಯ ಸದಸ್ಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಮೌಲಿದ್ ಮಜ್ಲೀಸ್ ನಂತರ ಹಝ್ರತ್ ಅಶೈಖ್ ಅಹ್ಮದ್ ಅಲ್‌ಹಾದಿ (ರ.ಅ.)ರವರ ದರ್ಗಾ ಝಿಯಾರತ್ ನಡೆಯಿತು.
Next Story





