ತುಮಕೂರು: ಬಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ; ಆರೋಪ

ತುಮಕೂರು: ಬಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವ ಘಟನೆ ಇಂದು ಸಂಜೆ 4:30 ರ ವೇಳೆಗೆ ಗುಬ್ಬು ಗೇಟ್ ಬಳಿ ನಡೆದಿದೆ.
ಭೀಮಸಂದ್ರ ಕಡೆಯಿಂದ ತುಮಕೂರು ನಗರಕ್ಕೆ ಬರುತ್ತಿದ್ದ ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ಹಾಗು ಕಿರಣ್ ಎಂಬವರ ಮೇಲೆ ರಸ್ತೆಯಲ್ಲಿ ಐದಾರು ಜನರ ಗುಂಪು ರಸ್ತೆ ಜಾಗ ಬಿಡುವ ವಿಚಾರದಲ್ಲಿ ಜಗಳ ತೆಗೆದು ರಾಡ್ ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೆ ಒಳಗಾದ ಬಜರಂಗದಳದ ಕಾರ್ಯಕರ್ತರು ಜಿಲ್ಲಾಸ್ಪತ್ರೆಯಲ್ಲಿ ಚಿಕ್ಸಿತೆ ಪಡೆಯುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿದ್ದು, ಭದ್ರತೆಗಾಗಿ ಹೆಚ್ಚಿನ ಪೊಲೀಸ್ ನಿಯೋಜಿಸಲಾಗಿದೆ.
ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಶಾಸಕ ಜೋತಿ ಗಣೇಶ್ ಎಸ್.ಪಿ. ಅವರಿಗೆ ಒತ್ತಾಯಿಸಿದ್ದಾರೆ.
Next Story





