ಮಂಗಳೂರು: ಕಾಸರಗೋಡು-ಮಂಜೇಶ್ವರ ಶಾಸಕರಿಗೆ ಸನ್ಮಾನ

ಮಂಗಳೂರು, ಅ.19: ದ.ಕ.ಜಿಲ್ಲಾ ಮುಸ್ಲಿಂ ಲೀಗ್ ವತಿಯಿಂದ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರನ್ನು ಇತ್ತೀಚೆಗೆ ನಗರದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಎನ್.ಎ.ನೆಲ್ಲಿಕುನ್ನು ಕೋಮುಸೌಹಾರ್ದ ಮತ್ತು ಜಾತ್ಯತೀತ ಪರಂಪರೆಯನ್ನು ಬೆಳೆಸಲು ಮುಸ್ಲಿಂ ಲೀಗ್ ಕಾರ್ಯಕರ್ತರು ಶ್ರಮಿಸಬೇಕು ಎಂದರು ಕರೆ ನೀಡಿದರು.
ಪಕ್ಷವು ಜನಹಿತ ಕಾರ್ಯಕ್ರಮ ಆಯೋಜಿಸಿ ಶಿಸ್ತುಬದ್ಧವಾಗಿ ಮುಂದುವರಿಯುತ್ತಿದೆ. ಪಕ್ಷದ ಬಲವರ್ಧನೆಗೆ ಇದು ಸಹಕಾರಿಯಾಗ ಲಿದೆ ಎಂದು ಶಾಸಕ ಎಕೆಎಂ ಅಶ್ರಫ್ ಅಭಿಪ್ರಾಯಪಟ್ಟರು.
ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಸುಲೈಮಾನ್ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಮುಸ್ಲಿಂ ಲೀಗ್ ಕಾರ್ಯದರ್ಶಿ ಎಂ. ಮೂಸಾ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಕಾರ್ಪೊರೇಟರ್ ಅಬ್ದುಲ್ಲತೀಫ್, ಮುಸ್ಲಿಂ ಲೀಗ್ ನಾಯಕ ಹಾಜಿ ಆದಂ ಹುಸೈನ್, ದ.ಕ.ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಅಧ್ಯಕ್ಷ ನೌಶಾದ್ ಮಲಾರ್ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಎ.ಎಸ್.ಇ. ಕರೀಂ ಸ್ವಾಗತಿಸಿದರು. ಮುಹಮ್ಮದ್ ಇಸ್ಮಾಯೀಲ್ ವಂದಿಸಿದರು. ಅಸ್ತ್ರಾರ್ ಗೂಡಿನಬಳಿ ಕಾರ್ಯಕ್ರಮ ನಿರೂಪಿಸಿದರು.







