ಆಸಾರಾಂ ಬಾಪು ಪುತ್ರನಿಗೆ ರಜೆ ಮೇಲೆ ತೆರಳಲು ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಸ್ವ ಘೋಷಿತ ದೇವಮಾನವ ಆಸಾರಾಂ ಬಾಪು ಅವರ ಪುತ್ರ, ಅತ್ಯಾಚಾರ ಪ್ರಕರಣದ ಅಪರಾಧಿ ನಾರಾಯಣ ಸಾಯಿಗೆ 14 ದಿನಗಳ ರಜೆ ಮೇಲೆ ತೆರಳಲು ಗುಜರಾತ್ ಹೈಕೋರ್ಟ್ ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ ಬುಧವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠವು ಸಾಯಿಗೆ ಅಲ್ಪ ಕಾಲ ರಜೆ ಮೇಲೆ ತೆರಳಲು ಅವಕಾಶ ನೀಡುವ ಹೈಕೋರ್ಟ್ ನ ಜೂನ್ 24 ರ ಆದೇಶವನ್ನು ಪ್ರಶ್ನಿಸಿದ್ದ ಗುಜರಾತ್ ಸರಕಾರದ ಮನವಿಯನ್ನು ಅನುಮತಿಸಿತು.
ರಜೆ ಮೇಲೆ ತೆರಳುವುದು ಸಂಪೂರ್ಣ ಹಕ್ಕಲ್ಲ ಹಾಗೂ ಅದು ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆಗಸ್ಟ್ 12 ರಂದು ಸಾಯಿಗೆ ಎರಡು ವಾರಗಳ ಕಾಲಾವಕಾಶ ನೀಡುವ ಗುಜರಾತ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ತಡೆಹಿಡಿದಿತ್ತು.
Next Story