Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೊರಗರ ಅಭಿವೃದ್ಧಿಗೆ ನಡೆಸಿದ ಹೋರಾಟಕ್ಕೆ...

ಕೊರಗರ ಅಭಿವೃದ್ಧಿಗೆ ನಡೆಸಿದ ಹೋರಾಟಕ್ಕೆ ಸಂದ ಗೌರವ; ಗೌರಿ ಕೆಂಜೂರುಗೆ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’

ವಾರ್ತಾಭಾರತಿವಾರ್ತಾಭಾರತಿ20 Oct 2021 9:29 PM IST
share
ಕೊರಗರ ಅಭಿವೃದ್ಧಿಗೆ ನಡೆಸಿದ ಹೋರಾಟಕ್ಕೆ ಸಂದ ಗೌರವ; ಗೌರಿ ಕೆಂಜೂರುಗೆ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’

ಉಡುಪಿ, ಅ.20: ಆಧುನಿಕರ ಎಲ್ಲಾ ಮಾನದಂಡಗಳಲ್ಲೂ ತೀರಾ ಕೆಳಸ್ತರದಲ್ಲಿರುವ ಕರಾವಳಿಯ ಮೂಲ ನಿವಾಸಿ ಆದಿವಾಸಿ ಕೊರಗರ ಬದುಕಿನ ಉನ್ನತೀಕರಣಕ್ಕಾಗಿ ಕಳೆದ ಎರಡೂವರೆ-ಮೂರು ದಶಕಗಳಿಂದ ನಡೆದಿರುವ ಹೆಚ್ಚಿನ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ, ಹೋರಾಟವನ್ನೇ ಬದುಕಿನ ಭಾಗವಾಗಿಸಿಕೊಂಡಿರುವ ಗೌರಿ ಕೆಂಜೂರು ಅವರಿಗೆ ಇದೀಗ ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ‘ವಾಲ್ಮೀಕಿ ಪ್ರಶಸ್ತಿ’ಯ ಗರಿ ಮುಡಿಯನ್ನಲಂಕರಿಸಿದೆ.

ಕೊರಗ ಜನಾಂಗದ ಅಭಿವೃದ್ಧಿ, ಅಭ್ಯುದಯಕ್ಕಾಗಿ ಹಲವು ಚಳವಳಿಗಳನ್ನು ರೂಪಿಸಿ, ಆ ಮೂಲಕ ಸರಕಾರದ ಗಮನ ಸೆಳೆದಿ ರುವ ಹೋರಾಟಗಳಲ್ಲಿ ಗೌರಿ ಅವರ ಹೆಸರು ಯಾವತ್ತೂ ಮುಂಚೂಣಿಯಲ್ಲಿರುತ್ತಿತ್ತು.

ಬ್ರಹ್ಮಾವರ ತಾಲೂಕು ಕೊಕ್ಕರ್ಣೆ ಸಮೀಪದ ಕೆಂಜೂರು ಕಲ್ಲುಗುಡ್ಡೆಯವರಾದ 40ರ ಹರೆಯದ ಗೌರಿ ಅವರು ಎಸೆಸೆಲ್ಸಿ ಪರೀಕ್ಷೆ ಮುಗಿಯುತಿದ್ದಂತೆ ಕೊರಗ ಹೋರಾಟಕ್ಕೆ ಧುಮುಕಿದ ಬಳಿಕ ಈವರೆಗೆ ಹಿಂದಿರುಗಿ ನೋಡಿದವರಲ್ಲ. ಆಗಷ್ಟೇ ಕೊರಗ ಅಭಿವೃದ್ಧಿಯ ಧ್ಯೇಯದೊಂದಿಗೆ ಪ್ರಾರಂಭವಾಗಿದ್ದ ಸಮಗ್ರ ಗ್ರಾಮೀಣ ಆಶ್ರಮದ ಮೂಲಕ ಅವರ ಮುಂದಿನ ಹೋರಾಟದ ಬದುಕು ಪ್ರಾರಂಭಗೊಂಡಿತು.

ಇತ್ತೀಚೆಗೆ ನಿಧನರಾದ ಗೋಕುಲದಾಸ್ ನೇತೃತ್ವದ ಕರ್ನಾಟಕ- ಕೇರಳ ಕೊರಗನ ಅಭಿವೃದ್ಧಿ ಸಂಘಗಳ ಒಕ್ಕೂಟ ಅವರ ಮುಂದಿನೆಲ್ಲಾ ಹೋರಾಟಗಳನ್ನು ರೂಪಿಸಿದ್ದವು. ಅದರಲ್ಲೂ ಕೊರಗ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿ ಇರಿಸಿಕೊಂಡ ಕೊರಗ ಸಮುದಾಯ ಮೊದಲ ಪದವೀಧರ ಗೋಕುಲದಾಸ್ ಅವರ ಮಾರ್ಗದರ್ಶನ ಗೌರಿ ಅವರ ಹೋರಾಟದ ಬದುಕನ್ನು ರೂಪಿಸಿತ್ತು.

ಹೀಗಾಗಿ 2000 ಇಸವಿಯ ಆಸುಪಾಸಿನಲ್ಲಿ ಪ್ರಾರಂಭಗೊಂಡ ಕೊರಗರ ಭೂಮಿ ಚಳವಳಿ, ಅಜಲು ಪದ್ಧತಿ ಮತ್ತು ಅಸ್ಪಶ್ಯತೆಯ ವಿರುದ್ಧ ಚಳವಳಿ, ಕೊರಗ ಪೌಷ್ಠಿಕ ಆಹಾರದ ಹೋರಾಟಗಳಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದರು. ಭೂಮಿ ಹೋರಾಟದ ಸಂದರ್ಭದಲ್ಲಿ ತುಂಬು ಗರ್ಭಿಣಿಯಾಗಿದ್ದ ಗೌರಿ ಜೈಲಿಗೂ ಹೋಗಿದ್ದರು. ಜೈಲಿನಿಂದ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಅವರು ಏಕೈಕ ಪುತ್ರಿಗೆ ಜನ್ಮ ನೀಡಿದ್ದು ಆಕೆಗೆ ‘ರಕ್ಷಾ’ ಎಂದೇ ಹೆಸರಿಟ್ಟಿದ್ದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆಯಾಗಿ, ಕಾರ್ಯದರ್ಶಿ ಯಾಗಿ, ಒಕ್ಕೂಟ ಸಂಘಟಿಸುತಿದ್ದ ನಮ್ಮ ನ್ಯಾಯ ಕೂಟದ ಪಂಚರಾಗಿ, ನ್ಯಾಯಾಧೀಶರಾಗಿ ಅವರು ಕಾರ್ಯನಿರ್ವಹಿಸಿದ್ದರು. ಅಲ್ಲದೇ ಸಮುಗ್ರ ಗ್ರಾಮೀಣ ಆಶ್ರಮದೊಂದಿಗೆ ಆಕೆಗೆ ಎರಡು ದಶಕಗಳ ನಂಟಿದೆ. ಅದರ ಕಾರ್ಯಕರ್ತೆಯಾಗಿ ಶಿಕ್ಷಣ ಮತ್ತು ಆರೋಗ್ಯ, ಮಹಿಳೆಯರ ಜೀವನಾಧಾರ ವಿಷಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು.

ಕೊರಗ ಮಹಿಳೆಯರ ಸಶಕ್ತೀಕರಣಕ್ಕಾಗಿ ಸ್ವಸಹಾಯ ಸಂಘಟನೆಯನ್ನು ಪ್ರಾರಂಭಿಸಿದ್ದರು. ಸಮುದಾಯದ ಮಕ್ಕಳು ಶಿಕ್ಷಣವನ್ನು ಅರ್ಧದಲ್ಲೇ ಕೈಬಿಡು ತ್ತಿರುವುದನ್ನು ತಡೆಯಲು ಕೊರಗ ಸಂಘಟನೆಗಳ ಮೂಲಕ ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸಿದ್ದರು. ಕೊರಗ ಜನಾಂಗ ತೀವ್ರ ರೀತಿಯಲ್ಲಿ ಅಪೌಷ್ಠಿಕತೆ ಯಿಂದ ಬಳಲುತ್ತಿರುವುದನ್ನು ತಡೆಯಲು, ಕೊರಗ ಜನಸಂಖ್ಯೆ ತೀವ್ರಗತಿಯಲ್ಲಿ ಕುಸಿಯುತ್ತಿರುವುದನ್ನು ತಡೆಯಲು ಸರಕಾರದ ವಿವಿಧ ಯೋಜನೆಗಳು ಸಮರ್ಪಕವಾಗಿ ಕೊರಗರಿಗೆ ತಲುಪುವಂತೆ ಶ್ರಮಿಸಿದ್ದರು.

38 ಕಳ್ತೂರು ಗ್ರಾಪಂನ ಸದಸ್ಯೆಯಾಗಿ ಆಯ್ಕೆಯಾಗಿದ್ದ ಗೌರಿ, ಇದೀಗ ಕೆಂಜೂರಿನಲ್ಲಿ ಕೊರಗರಿಗೆ ನೀಡುವ ಒಂದು ಎಕರೆ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಾ ಕೃಷಿಕೆಯಾಗಿ ಮಣ್ಣಿನೊಂದಿಗಿನ ನಂಟನ್ನು ಮುಂದುವರಿಸಿದ್ದಾರೆ. ಗೌರಿಯವರಿಗೆ ಪ್ರತಿಷ್ಠಿತ ‘ವಾಲ್ಮೀಕಿ ಪ್ರಶಸ್ತಿ’ ದೊರೆಯುವ ಮೂಲಕ ನೈಜ ಹೋರಾಟಗಾರ್ತಿಯೊಬ್ಬರಿಗೆ ನ್ಯಾಯ ಒದಗಿಸಿದಂತಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X