ಅರ್ಥರ್ ರೋಡ್ ಜೈಲಿನಲ್ಲಿ ಮಗನನ್ನು ಭೇಟಿಯಾದ ಶಾರುಖ್ ಖಾನ್

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ನಿನ್ನೆ ಜಾಮೀನು ನಿರಾಕರಿಸಲ್ಪಟ್ಟ ಹಾಗೂ ಅಕ್ಟೋಬರ್ 8 ರಿಂದ ಜೈಲಿನಲ್ಲಿರುವ ತನ್ನ ಮಗ ಆರ್ಯನ್ ಖಾನ್ ಅವರನ್ನು ಭೇಟಿ ಮಾಡಲು ಶಾರುಖ್ ಇಂದು ಮುಂಬೈನ ಆರ್ಥರ್ ರೋಡ್ ಜೈಲಿಗೆ ಭೇಟಿ ನೀಡಿದರು.
ಅಕ್ಟೋಬರ್ 2 ರಂದು ಮುಂಬೈನ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿಯ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ದಾಳಿ ನಡೆಸಿದ ನಂತರ ಬಂಧನಕ್ಕೊಳಗಾದ 23 ವರ್ಷದ ಮಗನನ್ನು ಇದೇ ಮೊದಲ ಬಾರಿ ಭೇಟಿಯಾದರು.
ಶಾರುಖ್ ಖಾನ್ ಅವರು ಜೈಲಿನ ಮೀಟಿಂಗ್ ಹಾಲ್‌ನಲ್ಲಿ ಕ್ಯೂಬಿಕಲ್‌ನಲ್ಲಿ ಇಂಟರ್‌ಕಾಮ್ ಮೂಲಕ ಆರ್ಯನ್ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತನಾಡಿದರು. ಸಾಂಕ್ರಾಮಿಕ ರೋಗದ ಮಧ್ಯೆ ಮಹಾರಾಷ್ಟ್ರ ಸರಕಾರವು ಜೈಲು ಭೇಟಿಗಳ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ ಶಾರುಖ್ ಭೇಟಿ ನೀಡಿದರು.
ಆರ್ಯನ್ ಖಾನ್ ಗೆ ಎರಡು ಬಾರಿ ಜಾಮೀನು ನಿರಾಕರಿಸಲಾಗಿದೆ. ಬಾಂಬೆ ಹೈಕೋರ್ಟ್ ಮಂಗಳವಾರ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ.
Next Story