Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಬಾಂಗ್ಲಾ ಅಲ್ಪಸಂಖ್ಯಾತರಿಗೆ ಬೇಕಿದೆ...

ಬಾಂಗ್ಲಾ ಅಲ್ಪಸಂಖ್ಯಾತರಿಗೆ ಬೇಕಿದೆ ನೆರವಿನ ಹಸ್ತ

ವಾರ್ತಾಭಾರತಿವಾರ್ತಾಭಾರತಿ22 Oct 2021 12:05 AM IST
share
ಬಾಂಗ್ಲಾ ಅಲ್ಪಸಂಖ್ಯಾತರಿಗೆ ಬೇಕಿದೆ ನೆರವಿನ ಹಸ್ತ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕಳೆದೆರಡು ವಾರಗಳಿಂದ ನೆರೆಯ ಬಾಂಗ್ಲಾ ದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಭಾರತದ ಆತ್ಮವನ್ನು ಇರಿದಿದೆ. ನೆರೆರಾಷ್ಟ್ರಗಳ ಜೊತೆಗಿನ ಬಾಂಧವ್ಯಗಳನ್ನು ಗಟ್ಟಿಗೊಳಿಸಬೇಕೆಂಬ ಹಂಬಲವನ್ನು ಭಾರತ ವ್ಯಕ್ತಪಡಿಸುತ್ತಿರುವ ದಿನಗಳಲ್ಲೇ, ದುರ್ಗಾಪೂಜೆಯ ದಿನ, ಅಲ್ಲಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಕೋಮುಗಲಭೆಗಳನ್ನು ಸೃಷ್ಟಿಸಲಾಗಿದೆ. ಬಾಂಗ್ಲಾ ದೇಶದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಹಿಂಸಾಚಾರದ ಹಿಂದೆ ರಾಜಕೀಯ ಕೈಗಳು ಕೆಲಸ ಮಾಡಿವೆ. ಭಾರತದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸಲು ಸಂಘಪರಿವಾರ ನಡೆಸುತ್ತಿರುವ ಸಂಚುಗಳನ್ನೇ ಬಾಂಗ್ಲಾದಲ್ಲಿ ಕೆಲವು ಶಕ್ತಿಗಳು ಮಾದರಿಯಾಗಿ ಬಳಸುತ್ತಿರುವಂತಿದೆ. ದುರ್ಗಾ ಪೂಜೆಯ ಸಂದರ್ಭದಲ್ಲಿ ದುರ್ಗೆಯ ಪಾದ ಬುಡದಲ್ಲಿ ಕುರ್‌ಆನ್ ಪ್ರತಿಯನ್ನು ಇಡಲಾಗಿದೆ ಎನ್ನುವ ವದಂತಿ ಅಂತಿಮವಾಗಿ ಕೋಮು ಹಿಂಸಾಚಾರಕ್ಕೆ ಕಾರಣವಾಯಿತು. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅದನ್ನು ಮುಂದಿಟ್ಟುಕೊಂಡು ಕಿಡಿಗೇಡಿಗಳು ಹಿಂಸಾಚಾರಕ್ಕಿಳಿಸಿದರು. ಒಂದು ವೇಳೆ ಇಂತಹದೊಂದು ಘಟನೆ ಸಂಭವಿಸಿದ್ದರೂ, ಕುರ್‌ಆನ್ ಮತ್ತು ಅದರ ತತ್ವ ಚಿಂತನೆಗಳ ಬಗ್ಗೆ ಆಳ ಅರಿವುಳ್ಳ ಜನರು ಖಂಡಿತವಾಗಿಯೂ ಹಿಂಸೆಗಿಳಿಯಲಾರರು. ಘಟನೆಯನ್ನು ತಾಳ್ಮೆಯಿಂದ ವೀಕ್ಷಿಸಿ, ಸತ್ಯಾಸತ್ಯತೆಗಳನ್ನು ಅರಿತ ಬಳಿಕ ಪ್ರತಿಕ್ರಿಯೆ ನೀಡುವುದೇ ಇಂತಹ ಸಂದರ್ಭದಲ್ಲಿ ಪ್ರಾಜ್ಞರು ಮಾಡಬಹುದಾದ ಕೆಲಸ. ಘಟನೆ ಬೆಳಕಿಗೆ ಬಂದಾಕ್ಷಣ ಅಲ್ಲಿನ ಸರಕಾರ ಕಾನೂನು ವ್ಯವಸ್ಥೆಯನ್ನು ಸುಭದ್ರಗೊಳಿಸಿದ್ದಿದ್ದರೆ, ಪೊಲೀಸ್ ವ್ಯವಸ್ಥೆಯನ್ನು ಬಿಗಿಯಾಗಿಸಿದ್ದರೆ ಹಿಂಸೆ ಉಲ್ಬಣಗೊಳ್ಳುತ್ತಿರಲಿಲ್ಲವೇನೋ? ಗಲಭೆಯಲ್ಲಿ ಆರು ಮಂದಿ ಅಮಾಯಕ ಅಲ್ಪಸಂಖ್ಯಾತರು ಮೃತಪಟ್ಟ ಬಳಿಕ ಅಲ್ಲಿನ ಸರಕಾರ ಎಚ್ಚೆತ್ತುಕೊಂಡಿದೆ. ದುಷ್ಕರ್ಮಿಗಳಿಗೆ ಅತ್ಯಂತ ಕಠಿಣ ಎಚ್ಚರಿಕೆಯನ್ನು ನೀಡಿದೆ. ಅಲ್ಲದೆ, ಆರೋಪಿ ಸ್ಥಾನದಲ್ಲಿರುವ ಯಾರೊಬ್ಬರನ್ನೂ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಷ್ಟೆ ಅಲ್ಲ, ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ನೀಡುವ ಭರವಸೆ ನೀಡಿದೆ.

 ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ, ದುರ್ಗಾ ಪ್ರತಿಮೆಯ ಪಾದ ಬುಡದಲ್ಲಿ ಕುರ್‌ಆನ್ ಗ್ರಂಥವನ್ನು ಇಡಲಾಗಿದೆ ಎನ್ನುವ ಅಂಶ ಇದೀಗ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಗ್ರಂಥವನ್ನು ಅಲ್ಲಿ ಇಟ್ಟ ವ್ಯಕ್ತಿ, ಬಾಂಗ್ಲಾದ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದವನು ಎಂದು ಅನುಮಾನ ಪಡಲಾಗಿದೆ ಮತ್ತು ಆತನ ಪತ್ತೆಗಾಗಿ ವ್ಯಾಪಕ ಬಲೆ ಬೀಸಲಾಗಿದೆ ಎಂದು ಬಾಂಗ್ಲಾ ಸರಕಾರ ಹೇಳಿಕೆ ನೀಡಿದೆ. ಇದರಿಂದ ಗೊತ್ತಾಗುವುದೇನೆಂದರೆ, ಗಲಭೆಯನ್ನು ಸೃಷ್ಟಿಸಿದವರಿಗೆ ಸ್ವತಃ ಕುರ್‌ಆನ್ ಧರ್ಮಗ್ರಂಥದ ಮೇಲೂ ಗೌರವವಿಲ್ಲ. ಒಂದು ವೇಳೆ ಅಂತಹ ಗೌರವವಿದ್ದರೆ, ತಮ್ಮ ರಾಜಕೀಯಕ್ಕಾಗಿ ಆ ಗ್ರಂಥವನ್ನು ಅವರು ದುರ್ಗಾ ಪೂಜೆ ನಡೆಯುವ ಜಾಗದಲ್ಲಿ ತಂದಿಟ್ಟು ಜನರ ನಡುವೆ ದ್ವೇಷವನ್ನು ಬಿತ್ತುತ್ತಿರಲಿಲ್ಲ. ಜನರು ಒಂದಿಷ್ಟು ತಾಳ್ಮೆಯಿಂದ, ವಿವೇಕದೊಂದಿಗೆ ವರ್ತಿಸಿದ್ದಿದ್ದರೆ ದುಷ್ಕರ್ಮಿಗಳ ಸಂಚನ್ನು ವಿಫಲಗೊಳಿಸಬಹುದಿತ್ತು. ಆದರೆ, ದುಷ್ಕರ್ಮಿಗಳು, ಧರ್ಮದ್ರೋಹಿಗಳು ತೋಡಿದ ಹೊಂಡಕ್ಕೆ ಜನಸಾಮಾನ್ಯರು ತಾವಾಗಿಯೇ ಹೋಗಿ ಬಿದ್ದರು. ಪರಿಣಾಮವಾಗಿ ನೂರಾರು ಜನರು ನಾಶ, ನಷ್ಟಗಳನ್ನು ಅನುಭವಿಸಬೇಕಾಯಿತು. ಸುಮಾರು 10 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ದೇವಸ್ಥಾನದ ಮೇಲೆ ದಾಳಿಗಳು ನಡೆದವು. ಒಟ್ಟಿನಲ್ಲಿ, ಪವಿತ್ರಗ್ರಂಥವನ್ನು ಬಳಸಿಕೊಂಡು ತಮ್ಮ ದುರುದ್ದೇಶ ಸಾಧಿಸುವಲ್ಲಿ ದುಷ್ಕರ್ಮಿಗಳು ಯಶಸ್ವಿಯಾದರು ಎನ್ನುವುದೇ ಇಲ್ಲಿನ ಖೇದಕರ ಅಂಶ. ಒಂದೆಡೆ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿರುವಾಗಲೇ, ಬಾಂಗ್ಲಾದಲ್ಲಿ ಬಹುಸಂಖ್ಯಾತ ಸಮುದಾಯದ ದೊಡ್ಡ ಗುಂಪು ಅಲ್ಪಸಂಖ್ಯಾತರ ಪರವಾಗಿ ನಿಂತಿತ್ತು ಎನ್ನುವುದು ನೆಮ್ಮದಿ ಕೊಡುವ ವಿಷಯ. ಕೋಮುಗಲಭೆಗಳು ವಿಸ್ತರಿಸದಂತೆ, ವಿವಿಧ ಜನಪರ, ಜೀವಪರ ಸಂಘಟನೆಗಳು ಬಾಂಗ್ಲಾದಲ್ಲಿ ಒಂದಾಗಿ ಜನರನ್ನು ಜಾಗೃತಿಗೊಳಿಸಿದವು. ಮಾನವೀಯ ಸಂದೇಶಗಳನ್ನು ಹರಡಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಯತ್ನಿಸಿದವು. ಅಲ್ಪಸಂಖ್ಯಾತರ ಪರವಾಗಿ ನಿಂತು ಅವರಲ್ಲಿ ಧೈರ್ಯ ತುಂಬಿದವು. ಹಾಗೆಯೇ, ಹಿಂಸೆಗೆ ಪ್ರತಿ ಹಿಂಸೆಯಿಂದ ಪ್ರತಿಕ್ರಿಯೇ ನೀಡದ ಬಾಂಗ್ಲಾದ ಹಿಂದೂ ಅಲ್ಪಸಂಖ್ಯಾತರು, ದೇಶಾದ್ಯಂತ ಉಪವಾಸ ಸತ್ಯಾಗ್ರಹ ಮಾಡಿದರು.

ಇದೀಗ ಕೋಮು ಹಿಂಸಾಚಾರದ ಹಿಂದಿರುವ ಶಕ್ತಿಗಳು ಯಾರು ಎನ್ನುವ ವಿವರಗಳು ನಿಧಾನಕ್ಕೆ ಹೊರಬರುತ್ತಿವೆ. ಹಾಗೆಯೇ, ಜನರು ಹಿಂಸಾಚಾರದಿಂದ ಹಿಂದೆ ಸರಿಯುತ್ತಿದ್ದಾರೆ. ಆದರೆ ಕಳೆದ ಒಂದು ವಾರದ ಹಿಂಸಾಚಾರದಲ್ಲಿ ದುಷ್ಕರ್ಮಿಗಳು ತಮ್ಮ ಉದ್ದೇಶವನ್ನು ಸಾಧಿಸಿಕೊಂಡಿದ್ದಾರೆ. ಮನಸ್ಸುಗಳನ್ನು ಒಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಆರ್ಥಿಕ ನಾಶ ನಷ್ಟಗಳನ್ನು ತುಂಬಬಹುದು. ಆದರೆ ಒಡೆದ ಮನಸ್ಸುಗಳನ್ನು ಜೋಡಿಸುವ ಮಹತ್ತಾದ ಕೆಲಸವನ್ನು ಸಾಧಿಸುವುದು ಅಷ್ಟು ಸುಲಭವಿಲ್ಲ. ಈ ಸವಾಲನ್ನು ಅಲ್ಲಿನ ಸರಕಾರ ಹೇಗೆ ಸ್ವೀಕರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು. ಬಾಂಗ್ಲಾದೇಶದ ಹಿಂಸಾಚಾರ ಉಲ್ಬಣಿಸಿದ ದಿನವೇ ಭಾರತ ಸರಕಾರ ದೊಡ್ಡ ಧ್ವನಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ್ದಿದ್ದರೆ ಅಲ್ಲಿನ ಸರಕಾರ ಎಚ್ಚೆತ್ತುಕೊಳ್ಳುತ್ತಿತ್ತೋ ಏನೋ? ವಿಶ್ವದ ವಿವಿಧ ಮಾನವ ಹಕ್ಕುಸಂಘಟನೆಗಳು ಖಂಡನೆ ವ್ಯಕ್ತಪಡಿಸುತ್ತಿದ್ದಾಗಲೂ, ಭಾರತ ಕಠಿಣ ಪದಗಳಲ್ಲಿ ಬಾಂಗ್ಲಾದ ಅಲ್ಪಸಂಖ್ಯಾತರ ಪರವಾಗಿ ಮಾತನಾಡಲು ಸೋತಿತು. ಬಹುಶಃ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರದ ಕುರಿತಂತೆ ಸರಕಾರ ನಿಷ್ಕ್ರಿಯತೆ ಅದರ ವೌನಕ್ಕೆ ಕಾರಣವಾಗಿರಬಹುದೇ? ಬಾಂಗ್ಲಾದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಅಲ್ಲಿನ ಪ್ರಧಾನಿ ಸ್ಪಷ್ಟ ಸ್ವರದಲ್ಲಿ ಖಂಡಿಸಿದ್ದಾರೆ. ಮತ್ತು ಆರೋಪಿಗಳಿಗೆ ಶಿಕ್ಷೆ ನೀಡುವ ಭರವಸೆ ನೀಡಿದ್ದಾರೆ. ಆದರೆ ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಬಗ್ಗೆ ಈವರೆಗೆ ಗೃಹಸಚಿವರಾಗಲಿ, ಪ್ರಧಾನಿಯಾಗಲಿ ಒಂದೇ ಒಂದು ಹೇಳಿಕೆಯನ್ನು ನೀಡಿಲ್ಲ.

ಹಿಂಸೆಗೆ ಪ್ರಚೋದನೆಗೈದವರ ಮೇಲೆ ಯಾವುದೇ ಪ್ರಕರಣ ದಾಖಲಿಸದೇ, ಸಂತ್ರಸ್ತರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಜೊತೆಗೆ ಸಂಘಪರಿವಾರದ ದುಷ್ಕರ್ಮಿಗಳು ಮಾರಕಾಸ್ತ್ರಗಳ ಜೊತೆಗೆ ಬಹಿರಂಗವಾಗಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ, ಇದೆಲ್ಲ ಸಹಜ ಎಂಬಂತೆ ಆಳುವವರು ವರ್ತಿಸುತ್ತಿದ್ದಾರೆ. ಆದುದರಿಂದಲೇ, ಬಾಂಗ್ಲಾದ ಅಲ್ಪಸಂಖ್ಯಾತರ ಪರವಾಗಿ ಮಾತನಾಡಬೇಕಾದ ಸರಕಾರ ಧ್ವನಿ ಕಳೆದುಕೊಂಡಂತಾಡುತ್ತಿದೆ. ನಮ್ಮ ಸರಕಾರ, ಭಾರತದೊಳಗಿರುವ ಅಲ್ಪಸಂಖ್ಯಾತರ ಬದುಕಿನ ಕುರಿತಂತೆ ಭರವಸೆಗಳನ್ನು ನೀಡಬೇಕಾಗಿದೆ. ಆ ಮೂಲಕ, ನೆರೆಯ ಪಾಕಿಸ್ತಾನ, ಬಾಂಗ್ಲಾದಂತಹ ದೇಶಗಳಿಗೆ ಅಲ್ಪಸಂಖ್ಯಾತರ ವಿಷಯದಲ್ಲಿ ಮಾದರಿಯಾಗಬೇಕಾಗಿದೆ. ತನ್ನದೇ ಪ್ರಾಯೋಜಕತ್ವದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸೆಯನ್ನು ಪ್ರಯೋಗಿಸಿ, ನೆರೆಯ ದೇಶಗಳಿಗೆ ಬುದ್ಧಿವಾದ ಹೇಳುವುದರಿಂದ ಯಾವ ರೀತಿಯಲ್ಲೂ ಪ್ರಯೋಜನವಾಗದು. ಭಾರತ ತನ್ನೊಳಗಿನ ಒಗ್ಗಟ್ಟನ್ನು ಮೊದಲು ಕಾಪಾಡಿಕೊಳ್ಳಬೇಕಾಗಿದೆ. ಅದು ಪರೋಕ್ಷವಾಗಿ ಇತರ ದೇಶಗಳಿಗೆ ಸಂದೇಶವೂ ಎಚ್ಚರಿಕೆಯೂ ಕೂಡ. ಜಾತಿ ಧರ್ಮದ ಹೆಸರಲ್ಲಿ ದೇಶದೊಳಗೇ ಪರಸ್ಪರ ಕಚ್ಚಾಡಿಸುತ್ತಾ, ನಾವು ಹೊರಗಿನ ಶತ್ರುಗಳನ್ನು ಎದುರಿಸಿ ಗೆಲ್ಲುವುದಕ್ಕೆ ಎಂದಿಗೂ ಸಾಧ್ಯವಿಲ್ಲ ಎನ್ನುವ ಸತ್ಯವನ್ನು ನಮ್ಮ ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X