ತ್ರಿಪುರಾದಲ್ಲಿ ಟಿಎಂಸಿ ಸಂಸದೆ ಮೇಲೆ ದಾಳಿ; ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು

ಅಗರ್ತಲಾ : ಮುಂದಿನ ವರ್ಷ ನಡೆಯಲಿರುವ ತ್ರಿಪುರಾ ವಿಧಾನಸಭಾ ಚುನಾವಣೆಗಳಿಗಾಗಿ ರಾಜ್ಯದಲ್ಲಿ ಟಿಎಂಸಿ ಪ್ರಚಾರಾಭಿಯಾನದ ನೇತೃತ್ವ ವಹಿಸಿರುವ ಸಂಸದೆ ಸುಷ್ಮಿತಾ ದೇವ್ ಅವರ ಮೇಲೆ ಇಂದು ದಾಳಿ ನಡೆದಿದ್ದು ಇದಕ್ಕೆ ಬಿಜೆಪಿ ಕಾರ್ಯಕರ್ತರು ಕಾರಣ ಎಂದು ಆಕೆ ದೂರಿದ್ದಾರೆ.
ದಾಳಿಯಲ್ಲಿ ಸಂಸದೆಗೆ ಗಾಯಗಳಾಗಿವೆ ಹಾಗೂ ಆಕೆ ಅಮ್ಟೂಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಟಿಎಂಸಿಯ ತ್ರಿಪುರಾರ್ ಜೊನ್ನೊ ತೃಣಮೂಲ ಅಭಿಯಾನದ ಭಾಗವಾಗಿ ಸಂಸದೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದಾಳಿ ನಡೆದಿದೆ. ಟಿಎಂಸಿಯ ಚುನಾವಣಾ ತಂತ್ರಗಾರಿಕೆ ನೋಡಿಕೊಳ್ಳುತ್ತಿರುವ ಐ-ಪ್ಯಾಕ್ ಸಂಸ್ಥೆಯ ಕೆಲ ಉದ್ಯೋಗಿಗಳ ಮೇಲೂ ದಾಳಿ ನಡೆದಿದ್ದು ಅವರಲ್ಲಿ ಕೆಲವರ ಮೊಬೈಲ್ ಫೋನ್‍ಗಳನ್ನು ಬಿಜೆಪಿ ಕಾರ್ಯಕರ್ತರು ಸೆಳೆದಿದ್ದಾರೆ ಎಂದು ಆರೋಪಿಸಲಾಗಿದೆ.
Next Story