ಅಸ್ಸಾಂ: 1 ಕೋ. ರೂ. ಮೌಲ್ಯದ ಮಾದಕ ದ್ರವ್ಯ ವಶ: ಮೂವರು ಯೋಧರು ಸೇರಿದಂತೆ ನಾಲ್ವರ ಬಂಧನ

ಗುವಾಹತಿ, ಅ. 22: ಮಾದಕ ದ್ರವ್ಯ ಸಾಗಾಟ ಮಾಡಿದ ಆರೋಪದಲ್ಲಿ ಅಸ್ಸಾಂ ರೈಫಲ್ಸ್ನ ಮೂವರು ಯೋಧರು ಹಾಗೂ ಓರ್ವ ನಾಗರಿಕನನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಸೇನಾ ಬೇಹುಗಾರಿಕೆ ನೀಡಿದ ಮಾಹಿತಿಯ ಆಧಾರದಲ್ಲಿ ಅಸ್ಸಾಂ ಪೊಲೀಸರು ಮೇಲಿನ ಅಸ್ಸಾಂನ ದಿಬ್ರುಗಡಧ ಜೋಕಾಯಿಯ ಸಮೀಪ ಈ ಬಂಧನ ನಡೆಸಿದ್ದಾರೆ. ಮೂವರು ಯೋಧರನ್ನು ನಾಗಾಲ್ಯಾಂಡ್ನ ಕೋಹಿಮಾಕ್ಕೆ ನಿಯೋಜಿಸಲಾಗಿತ್ತು.
ಇವರಿಂದ ವಶಪಡಿಸಿಕೊಳ್ಳಲಾದ ಮಾದಕ ಪದಾರ್ಥಕ್ಕೆ ಅಂತಾರಾಷ್ಟ್ರೀಯ ಕಾಳ ಮಾರುಕಟ್ಟೆಯಲ್ಲಿ 1 ಕೋಟಿ ರೂಪಾಯಿ ವೌಲ್ಯ ಅಂದಾಜಿಸಲಾಗಿದೆ. ಕೆಲವರು ಮಾದಕ ದ್ರವ್ಯ ವ್ಯಾಪಾರಕ್ಕಾಗಿ ಜೊರ್ಹಾತ್ನಿಂದ ಕಾರಿನಲ್ಲಿ ತೀನ್ಸುಕಿಯಾಕ್ಕೆ ಪ್ರಯಾಣಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ಪಡೆದುಕೊಂಡಿದ್ದರು ಎಂದು ದಿಬ್ರುಗಡಢ ಎಸ್ಪಿ ಶ್ವೇತಾಂಕ್ ಮಿಶ್ರಾ ಅವರು ತಿಳಿಸಿದ್ದಾರೆ.
Next Story