ಎಐಸಿಸಿ ಸೆಂಟ್ರಲ್ ಕಂಟ್ರೋಲ್ ರೂಮ್ ಮುಖ್ಯಸ್ಥರಾಗಿ ಬಿ.ಕೆ. ಹರಿಪ್ರಸಾದ್

ಬಿ.ಕೆ. ಹರಿಪ್ರಸಾದ್
ಮಂಗಳೂರು, ಅ.23: ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರನ್ನು ಎಐಸಿಸಿ ಸೆಂಟ್ರಲ್ ಕಂಟ್ರೋಲ್ ರೂಮ್ ತಂಡದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
ಹಿರಿಯ ಕಾಂಗ್ರೆಸ್ ಮುಖಂಡರಾದ ಮನಿಶ್ ಚಾತ್ರತ್, ಜೆ.ಡಿ. ಸೀಲಮ್. ಡಾ. ಉದಿತ್ ರಾಜ್, ಗುರುದೀಪ್ ಸಿಂಗ್ ಸಪ್ಪಲ್, ಡಾ.ರಾಗಿಣಿ ನಾಯಕ್, ವಿನೀತ್ ಪುನಿಯ, ನವೀನ್ ಶರ್ಮ, ಡಾ. ಹರ್ಷವರ್ಧನ್ ಶ್ಯಾಮ್ ಈ ತಂಡದ ಸದಸ್ಯರಾಗಿರುತ್ತಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆ ಮೇರೆಗೆ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.
ಬಿ.ಕೆ. ಹರಿಪ್ರಸಾದ್ ನೇತೃತ್ವದ ಸಮಿತಿಯು ದೇಶಾದ್ಯಂತ ಪಕ್ಷದಿಂದ ನಡೆಸಲಾಗುವ ನಿರಂತರ ಚಳವಳಿ ಕಾರ್ಯಕ್ರಮಗಳ ಸಂಯೋಜಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಕಟನೆ ತಿಳಿಸಿದೆ.
Next Story





