ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಉಡುಪಿ, ಅ.23: ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲ ಗ್ರಾಮಗಳಿಗೂ ಬಸ್ ಸೇವೆ ಪುನರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಮುಂಭಾಗ ಪ್ರತಿಭಟನೆ ನಡೆಸಿತು.
ಎಬಿವಿಪಿ ಜಿಲ್ಲಾ ಸಂಚಾಲಕ ಆಶಿಶ್ ಶೆಟ್ಟಿ, ನಗರ ಕಾರ್ಯದರ್ಶಿ ಸುಮುಖ ಭಟ್, ಸಹ ಕಾರ್ಯದರ್ಶಿ ಆಕಾಶ್, ವಿದ್ಯಾರ್ಥಿನಿ ಪ್ರಮುಖ್ ಅಶ್ವಿನಿ, ನಗರ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಕಾರ್ಯಕರ್ತ ನಿರಂಜನ್, ಗಣೇಶ್, ಚಿನ್ಮಯ್, ಗೌತಮ್, ಗಿರೀಶ್, ಸರ್ಥಕ್, ಪ್ರಸನ್ನ, ವಿಕಾಸ್, ಅಜಿತ್, ಗಣಪತಿ, ಶ್ರೀಶ, ಶ್ರೇಯಸ್, ರಂಜಿತ್ ಉಪಸ್ಥಿತರಿದ್ದರು.
Next Story





