ಕಾಂಗ್ರೆಸ್ ಪಕ್ಷವನ್ನು ಫಿನಾಯಿಲ್ ಹಾಕಿ ತೊಳೆಯಬೇಕಾಗಿದೆ: ಸಚಿವ ಅಶ್ವತ್ಥ ನಾರಾಯಣ್

ಉಡುಪಿ : ನಮ್ಮ ದೇಶದಲ್ಲಿ ಬೇಡವಾದ ಸಂಸ್ಕೃತಿ, ವಿಚಾರ, ಆಡಳಿತ ಕೊಟ್ಟು, ದೇಶಕ್ಕೆ ಸಮಸ್ಯೆಯಾದ ಕಾಂಗ್ರೆಸ್ ಪಕ್ಷವನ್ನು ಫಿನಾಯಿಲ್ ಹಾಕಿ ತೊಳೆಯಬೇಕಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಕಟುವಾಗಿ ಟೀಕಿಸಿದ್ದಾರೆ.
ಬೈಂದೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಂಪೂರ್ಣವಾಗಿ ಕುಟುಂಬ ಆಧಾರಿತವಾಗಿ ಕೆಲಸ ಮಾಡುತ್ತಿರುವ ಪಕ್ಷ. ಹಾಗಾಗಿ ಕಾಂಗ್ರೆಸ್ ಪಕ್ಷ ನಮ್ಮ ದೇಶಕ್ಕೆ ಪ್ರಸ್ತುತವಲ್ಲ. ಜನರ ಪಕ್ಷನೂ ಅಲ್ಲ. ಅದು ಎಲ್ಲೋ ಫಾರಿನ್ ಪಾರ್ಟಿ. ಅದಕ್ಕಾಗಿ ನಮ್ಮ ದೇಶಕ್ಕೆ ಅದು ಪ್ರಸ್ತುತ ಅಲ್ಲ ಎನ್ನುವುದಕ್ಕೆ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೂಕ್ತವಾದ ಉತ್ತರವನ್ನು ನೀಡಿದ್ದಾರೆ ಎಂದರು.
ಭಾರತೀಯ ಜನತಾ ಪಕ್ಷ ಜನರ ಪರ ಕಾಳಜಿ ವಹಿಸುತ್ತೇವೆ. ಅದು ಜನರ ಪಕ್ಷವಾಗಿದೆ. ನಮ್ಮತನ, ನಮ್ಮ ಸಂಸ್ಕೃತಿ, ನಮ್ಮ ವಿಚಾರವನ್ನು ಉಳಿಸಿ ಕೊಳ್ಳುವಲ್ಲಿ ಪಣ ತೊಟ್ಟಿದೆ. ಇನ್ನೂ ಮುಂದೆ ಕೂಡ ಕಾಂಗ್ರೆಸ್ ಪಕ್ಷವನ್ನು ನಿರ್ಣಾನಾಮ ಮಾಡುತ್ತೇವೆ ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದರು.
Next Story





