ಅಜ್ಜರಕಾಡು: ಕ್ರೀಡಾ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ

ಉಡುಪಿ, ಅ.23: ಸ್ವಚ್ಛತಾ ಅಭಿಯಾನದ ಅಂಗವಾಗಿ ಉಡುಪಿ ಜಿಲ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ವತಿಯಿಂದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದ ಪರಿಸರದಲ್ಲಿ ಕ್ರೀಡಾ ವಿದ್ಯಾರ್ಥಿಗಳಿಂದ ಶನಿವಾರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು ಒಳಾಂಗಣ ಕ್ರೀಡಾಂಗಣ, ಹೊರಾಂಗಣ ಕ್ರೀಡಾಂಗಣ ಹಾಗೂ ಅಜ್ಜರಕಾಡು ಭುಜಂಗ್ ಪಾರ್ಕ್ ಸುತ್ತಮುತ್ತ ಪರಿಸವನ್ನು ಶ್ರಮದಾನದ ಮೂಲಕ ಸ್ವಚ್ಛತೆ ಮಾಡಿದರು.
ಈ ಸಂದರ್ಭದಲ್ಲಿ ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಅಥ್ಲೆಟಿಕ್ ತರಬೇತುದಾರರಾದ ಅನಂತ ರಾಮ್, ಶಾಲಿನಿ ಶೆಟ್ಟಿ, ಅಬ್ಬಾಸ್, ಜಿಮ್ ತರಬೇತುದಾರ ಉಮೇಶ್ ಮಟ್ಟು, ಬ್ಯಾಡ್ಮಿಂಟನ್ ತರಬೇತುದಾರ ಅಕ್ಷಯ್ ಮೊದಲಾದವರು ಉಪಸ್ಥಿತರಿದ್ದರು.
Next Story





