ಶಾರುಖ್ ಖಾನ್ ಬಿಜೆಪಿ ಸೇರಿದರೆ ‘ಡ್ರಗ್ಸ್ ಶುಗರ್ ಪೌಡರ್’ ಆಗುತ್ತದೆ : ಎನ್ ಸಿಪಿ ಹಿರಿಯ ನಾಯಕ ವ್ಯಂಗ್ಯ

ಬೀಡ್: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಒಂದು ವೇಳೆ ಬಿಜೆಪಿ ಸೇರಿದರೆ ‘ಡ್ರಗ್ಸ್ ಶುಗರ್ ಪೌಡರ್ ಆಗುತ್ತದೆ’ ಎಂದು ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಮುಂಬೈ ಡ್ರಗ್ಸ್ ಪ್ರಕರಣದ ಕುರಿತು ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಬಂಧಿತ ಆರೋಪಿಗಳಲ್ಲಿ ಒಬ್ಬನಾಗಿದ್ದಾರೆ.
ಗುಜರಾತ್‌ನ ಮುಂಡ್ರಾ ಬಂದರಿನಲ್ಲಿ ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಈ ಪ್ರಕರಣವನ್ನು ತನಿಖೆ ಮಾಡುವ ಬದಲು ಕೇಂದ್ರೀಯ ಸಂಸ್ಥೆಯಾದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ) ಶಾರುಖ್ ಖಾನ್ ಅವರನ್ನು ಬೇಟೆಯಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
Next Story