ಟ್ವೆಂಟಿ-20 ವಿಶ್ವಕಪ್: ಶ್ರೀಲಂಕಾ ಗೆಲುವಿಗೆ 172 ರನ್ ಗುರಿ ನೀಡಿದ ಬಾಂಗ್ಲಾದೇಶ

photo: AFP
ಶಾರ್ಜಾ, ಅ.24: ಮುಹಮ್ಮದ್ ನಯಿಮ್(62, 52 ಎಸೆತ) ಹಾಗೂ ಮುಶ್ಫಿಕುರ್ರಹೀಂ(ಔಟಾಗದೆ 57, 37 ಎಸೆತ) ಅರ್ಧಶತಕದ ಕೊಡುಗೆಯ ನೆರವಿನಿಂದ ಬಾಂಗ್ಲಾದೇಶ ತಂಡವು ಶ್ರೀಲಂಕಾ ತಂಡಕ್ಕೆ ಟ್ವೆಂಟಿ-20 ವಿಶ್ವಕಪ್ ನ ಗ್ರೂಪ್-1ರ 15ನೇ ಪಂದ್ಯದ ಗೆಲುವಿಗೆ 172 ರನ್ ಗುರಿ ನಿಗದಿಪಡಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾದೇಶ ತಂಡವು ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿದೆ. ಬಾಂಗ್ಲಾದ ಇನಿಂಗ್ಸ್ ಆರಂಭಿಸಿದ ನಯಿಮ್(62,52 ಎಸೆತ, 6 ಬೌಂಡರಿ)ಹಾಗೂ ಲಿಟನ್ ದಾಸ್(16,16 ಎಸೆತ)ಮೊದಲ ವಿಕೆಟ್ ಗೆ 40 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.
ಔಟಾಗದೆ 57(37 ಎಸೆತ, 5 ಬೌಂ., 2 ಸಿ.) ರನ್ ಗಳಿಸಿದ ಮುಶ್ಫಿಕುರ್ರಹೀಂ ಹಾಗೂ ನಾಯಕ ಮಹ್ಮೂದುಲ್ಲಾ(ಔಟಾಗದೆ 10)ತಂಡದ ಸ್ಕೋರನ್ನು 171ಕ್ಕೆ ತಲುಪಿಸಿದರು. ಲಂಕಾದ ಪರವಾಗಿ ಚಾಮಿಕ ಕರುಣರತ್ನೆ(1-12), ಬಿನುರ ಫೆರ್ನಾಂಡೊ(1-27), ಲಹಿರು ಕುಮಾರ(1-29)ತಲಾ ಒಂದು ವಿಕೆಟ್ ಪಡೆದರು.
Next Story