ಹಿಮಾಚಲ ಪ್ರದೇಶ: ಭಾರೀ ಹಿಮಪಾತಕ್ಕೆ 3 ಚಾರಣಿಗರು ಮೃತ್ಯು,10 ಮಂದಿ ರಕ್ಷಣೆ

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಹಿಮಪಾತಕ್ಕೆ ಸಿಲುಕಿ ಮಹಾರಾಷ್ಟ್ರದ ಮೂವರು ಚಾರಣಿಗರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಚಾರಣಿಗರ ತಂಡದಲ್ಲಿದ್ದ ಇತರ ಹತ್ತು ಮಂದಿಯನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದಿಂದ 12 ಹಾಗೂ ಪಶ್ಚಿಮ ಬಂಗಾಳದಿಂದ ಒಬ್ಬರು ಸೇರಿದಂತೆ 13 ಚಾರಣಿಗರ ಗುಂಪು ಅಕ್ಟೋಬರ್ 17 ರಂದು ರೋಹ್ರುನಿಂದ ಕಿನ್ನೌರ್‌ಗೆ ತಮ್ಮ ಪಯಣ ಆರಂಭಿಸಿದ್ದವು. ಈ ಪ್ರದೇಶದಲ್ಲಿ ಭಾರೀ ಹಿಮಪಾತದಿಂದಾಗಿ ಬುರುವಾ ಕಾಂಡಾ ಎಂಬ ಪ್ರದೇಶದಲ್ಲಿ ಚಾರಣಿಗರು ಸಿಕ್ಕಿಹಾಕಿಕೊಂಡರು.
ಮೃತಪಟ್ಟವರನ್ನು ರಾಜೇಂದ್ರ ಪಾಠಕ್, ಅಶೋಕ್ ಭಲೇರಾವ್ ಹಾಗೂ ದೀಪಕ್ ರಾವ್ ಎಂದು ಗುರುತಿಸಲಾಗಿದೆ.
Next Story