ಟ್ವೆಂಟಿ-20 ವಿಶ್ವಕಪ್: ಪಾಕ್ ಆಟಗಾರನನ್ನು ಅಪ್ಪಿ ಅಭಿನಂದಿಸಿದ ಕೊಹ್ಲಿ,ಕ್ರೀಡಾಸ್ಫೂರ್ತಿಗೆ ನೆಟ್ಟಿಗರ ಪ್ರಶಂಸೆ

ದುಬೈ: ಪಾಕಿಸ್ತಾನ ವಿರುದ್ಧ ರವಿವಾರ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತವು 10 ವಿಕೆಟ್ ಗಳ ಅಂತರದಿಂದ ಭಾರೀ ಸೋಲನುಭವಿಸಿತ್ತು. ಪಂದ್ಯ ಮುಗಿದ ನಂತರ ಪಾಕ್ ಗೆಲುವಿಗೆ ಕಾರಣರಾದ ಆರಂಭಿಕ ಬ್ಯಾಟ್ಸ್ ಮನ್ ಮುಹಮ್ಮದ್ ರಿಝ್ವಾನ್ ಬಳಿಗೆ ತೆರಳಿದ ವಿರಾಟ್ ಕೊಹ್ಲಿ ಅವರನ್ನು ಅಪ್ಪಿಕೊಂಡು ಅಭಿನಂದಿಸಿದರು. ಆ ಕ್ಷಣಗಳನ್ನು ಸೆರೆ ಹಿಡಿದಿರುವ ವೀಡಿಯೊ ತುಣುಕು ಹಾಗೂ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕ್ಯಾಪ್ಟನ್ ಕೊಹ್ಲಿಯವರ ಕ್ರೀಡಾ ಸ್ಫೂರ್ತಿಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಎನ್ನುವುದು ಗೌರವಾನ್ವಿತ ಆಟವಾಗಿದೆ. ನಾವು ಖಂಡಿತವಾಗಿಯೂ ಆಟವನ್ನು ಗೌರವಿಸುತ್ತೇವೆ. ನಾವು ವಿರೋಧಿಗಳ ನಡುವೆ ವ್ಯತ್ಯಾಸವನ್ನು ಮಾಡುವುದಿಲ್ಲ. ನಮ್ಮ ಆಟವನ್ನಷ್ಟೇ ನಾವು ಆಡುತ್ತೇವೆ ಎಂದು ಭಾರತದ ನಾಯಕ ಹೇಳಿದ್ದಾರೆ.
Best photos on the Internet last night#TeamIndia #IndiaVsPak #viratkholi #BabarAzam #rizwan pic.twitter.com/SHglbp60Yr
— VishalPuniaIYC (@vishalpuniaIYC) October 25, 2021
okay this is adorable. real classy, Kohli. love you, Rizwan. pic.twitter.com/GevDf5TnNU
— Maryam (@maryamful) October 24, 2021