Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕ್ಲಾಸ್‌ನಲ್ಲಿ ಪುಟಾಣಿ ಮಕ್ಕಳೊಂದಿಗೆ...

ಕ್ಲಾಸ್‌ನಲ್ಲಿ ಪುಟಾಣಿ ಮಕ್ಕಳೊಂದಿಗೆ ಹಾಡಿ ಕುಣಿದ ಉಡುಪಿ ಡಿಡಿಪಿಐ

ಹೊಸ ಹುರುಪಿನೊಂದಿಗೆ ಪ್ರಾರಂಭಗೊಂಡ ಪ್ರಾಥಮಿಕ ಶಾಲಾ ತರಗತಿಗಳು

ವಾರ್ತಾಭಾರತಿವಾರ್ತಾಭಾರತಿ25 Oct 2021 7:16 PM IST
share
ಕ್ಲಾಸ್‌ನಲ್ಲಿ ಪುಟಾಣಿ ಮಕ್ಕಳೊಂದಿಗೆ ಹಾಡಿ ಕುಣಿದ ಉಡುಪಿ ಡಿಡಿಪಿಐ

ಉಡುಪಿ, ಅ.25: ರಾಜ್ಯಾದ್ಯಂತ ಕೊರೋನ ಸೋಂಕಿನ ತೀವ್ರತೆ ಕಡಿಮೆಯಾಗುತಿದ್ದಂತೆ ಇಂದಿನಿಂದ ಒಂದನೇ ತರಗತಿಯಿಂದ ಐದನೇ ತರಗತಿಯ ವರೆಗಿನ ಪ್ರಾಥಮಿಕ ಶಾಲೆಗಳೂ ಒಂದೂವರೆ ವರ್ಷದ ಬಳಿಕ ಮಕ್ಕಳಿಗಾಗಿ ಬಾಗಿಲು ತೆರೆದುಕೊಂಡಿವೆ.

ಇಂದು ಬೆಳಗಿನಿಂದ ಶಾಲಾ ವಠಾರಗಳಲ್ಲಿ ಮಕ್ಕಳ ಕೇಕೆ, ಕಲರವ, ಗೌಜಿ-ಗದ್ದಲಗಳು ವಿವಿಧ ರೂಪದಲ್ಲಿ ಪ್ರಕಟಗೊಂಡವು. ಮಕ್ಕಳಲ್ಲಿ ಹೊಸ ಹುರುಪು ಲವಲವಿಕೆ ಕಂಡುಬರುತ್ತಿತ್ತು. ಈ ನಡುವೆ ಸ್ವತಹ ಹಲವು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಯನ್ನು ಖುದ್ದಾಗಿ ಅವಲೋಕಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ)ಎನ್.ಎಚ್.ನಾಗೂರ, ಪುಟಾಣಿ ಮಕ್ಕಳೊಂದಿಗೆ ಹಾಡಿ ಕುಣಿದ ಘಟನೆಯೂ ನಡೆದಿದೆ.

ಬೆಳಗ್ಗೆ ಉಡುಪಿ ನಗರದ ವಳಕಾಡು ನಾರ್ತ್ ಶಾಲೆಗೆ ಭೇಟಿ ನೀಡಿದ ವೇಳೆ ಅವರು ಒಂದನೇ ತರಗತಿಯ ಮಕ್ಕಳೊಂದಿಗೆ ಪಠ್ಯದಲ್ಲಿರುವ ಪದ್ಯವೊಂದನ್ನು ಮಕ್ಕಳಿಗೆ ಕಲಿಸಿದರು. ಮಕ್ಕಳ ಜೊತೆ ಅವರೂ ಹಾಡಿ ಕುಣಿದರು. ಒಟ್ಟಿನಲ್ಲಿ ಸುಧೀರ್ಘ ಕಾಲದ ಬಳಿಕ ಶಾಲೆ ಪ್ರಾರಂಭಗೊಂಡಿದ್ದು, ಶಾಲೆಯ ಮಕ್ಕಳು, ಶಿಕ್ಷಕರು, ಸಿಬ್ಬಂದಿಗಳು ಹಾಗೂ ಅಧಿಕಾರಿಗಳಲ್ಲೂ ಹೊಸ ಹುರುಪು ಕಂಡುಬಂತು.

ಹೆಚ್ಚಿನ ಶಾಲೆಗಳಲ್ಲಿ ಒಪ್ಪಿಗೆ ಪತ್ರಗಳ ಜೊತೆಗೆ ಸ್ವತಹ ಪೋಷಕರೇ ಮಕ್ಕಳನ್ನು ಶಾಲೆಗಳಿಗೆ ಕರೆತಂದು ಬಿಡುತ್ತಿರುವುದು ಕಂಡುಬಂತು. ಕೊರೋನ ಮಾರ್ಗದರ್ಶಿ ಸೂತ್ರಗಳನ್ನು ಶಾಲೆಗಳು ಎಷ್ಟರ ಮಟ್ಟಿಗೆ ಪಾಲಿಸುತ್ತಿವೆ ಎಂಬುದನ್ನು ಅರಿಯಲು ಹೆಚ್ಚಿನ ಪೋಷಕರು ಶಾಲೆಗಳಿಗೆ ಆಗಮಿಸಿದ್ದರು.

ಇಲಾಖೆಯ ಅಧಿಕಾರಿಗಳೂ ದಿನವಿಡೀ ಹಲವು ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ತೆರಳಿ ವ್ಯವಸ್ಥೆಗಳನ್ನು ಅವಲೋಕಿಸಿ ದರು. ಶಿಕ್ಷಕರು ಪಾಠ ಮಾಡುವ ಸಂದರ್ಭ ತರಗತಿಯಲ್ಲಿ ಇದ್ದು ಪರಿಶೀಲನೆ ನಡೆಸಿದರು. ಹೀಗೆ ವಳಕಾಡು ಶಾಲೆಯ ಒಂದನೇ ತರಗತಿಗೆ ಭೇಟಿ ನೀಡಿದ ವೇಳೆ ಅವರು ಮಕ್ಕಳಿಗೆ ತಾವೇ ಪದ್ಯ ಕಲಿಸಿ ಕುಣಿದು ತೋರಿಸಿದರು.

ಎಲ್ಲರಲ್ಲೂ ಹೊಸ ಹುರುಪು

ಉಡುಪಿ ಜಿಲ್ಲೆಯಲ್ಲಿ ಎಲ್ಲಾ 249 ಶಾಲೆಗಳು ಹೊಸ ಹುರುಪಿನೊಂದಿಗೆ ಪ್ರಾರಂಭಗೊಂಡಿವೆ. ಶಿಕ್ಷಕರೂ ಹುಮ್ಮಸ್ಸಿನಲ್ಲಿದ್ದು, ಉತ್ಸಾಹದಿಂದಲೇ ಪಾಠ ಪ್ರಾರಂಭಿಸಿದ್ದಾರೆ. ಸುಮಾರು 35 ಸಾವಿರ ವಿದ್ಯಾರ್ಥಿಗಳಿದ್ದು, ನಾನು ಈವರೆಗೆ 3-4 ಶಾಲೆಗಳಿಗೆ ಭೇಟಿ ಕೊಟ್ಟಿದ್ದು, ಎಲ್ಲಾ ಕಡೆ ಮಕ್ಕಳು ಬಹಳ ಉತ್ಸುಕತೆಯಿಂದ ಶಾಲೆಗೆ ಬರುತ್ತಿದ್ದಾರೆ ಎಂದು ಡಿಡಿಪಿಐ ನಾಗೂರ ಈ ಸಂದರ್ಭದಲ್ಲಿ ಖುಷಿಯಿಂದ, ಹೆಮ್ಮೆಯಿಂದ ನುಡಿದರು.

ಮಕ್ಕಳ ಖುಷಿ ಕಣ್ಣಲ್ಲಿ ಕಂಡಿದ್ದೇನೆ. ಮೊಬೈಲ್‌ನ ಗೋಳು ದೂರಾಯಿತು. ಮುಖಾಮುಖಿ ಕ್ಲಾಸ್‌ಗಳು ಆರಂಭವಾಗಿರುವುದರಿಂದ ಮಕ್ಕಳಿಗೆ ಬಹಳ ಖುಷಿ ಯಾಗುತ್ತಿದೆ. ಶಿಕ್ಷಕರು ಕೂಡ ಸುರಕ್ಷತಾ ಅಂತರ, ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ಬಳಸಿ ಪಾಠಗಳನ್ನು ಶುರುಮಾಡಿದ್ದಾರೆ ಎಂದವರು ವಿವರಿಸಿದರು.

ಆತಂಕ ಬೇಡ:  ಒಂದು ವಾರಗಳ ಕಾಲ ಮುಂಜಾನೆಯಿಂದ ಮಧ್ಯಾಹ್ನ ದವರೆಗೆ ಮಾತ್ರ ಕ್ಲಾಸುಗಳು ನಡೆಯುತ್ತವೆ. ಆನಂತರ ದಿನಪೂರ್ತಿ ಕ್ಲಾಸ್ ಮಾಡಲು ಆದೇಶ ಸರಕಾರದಿಂದ ಬಂದಿದೆ. ಉಡುಪಿ ಜಿಲ್ಲೆಯ ಬೇರೆಬೇರೆ ತಾಲೂಕುಗಳಿಗೆ ಭೇಟಿ ಕೊಟ್ಟಿದ್ದೇನೆ. ಶಿಕ್ಷಕರ ಜೊತೆ ಪೋಷಕರ ಜೊತೆ ಸಭೆಗಳನ್ನು ಮಾಡಿದ್ದೇನೆ. ಎಲ್ಲರೂ ಶಾಲೆ ಆರಂಭಿಸಿ ಎಂಬ ಉತ್ಸುಕತೆಯನ್ನು ತೋರಿಸಿದ ಹಿನ್ನೆಲೆಯಲ್ಲಿ ಸರಕಾರಕ್ಕೆ ವರದಿ ಕೊಟ್ಟಿದ್ದೇನೆ. ಹೀಗಾಗಿ ಪೋಷಕರಿಗೆ ಯಾವುದೇ ಭಯ, ಆತಂಕ ಬೇಡ. ಮಕ್ಕಳನ್ನು ನಿರಾತಂಕವಾಗಿ ಶಾಲೆಗೆ ಕಳುಹಿಸಿ ಎಂದವರು ನುಡಿದರು.

ರಾಜ್ಯ ಸರಕಾರದ ಆದೇಶವನ್ನು ಎಲ್ಲಾ ಸರಕಾರಿ, ಅನುದಾನಿತ ಮತ್ತು ಖಾಸಗಿ ಸಂಸ್ಥೆಗಳು ಪಾಲಿಸಬೇಕು. ನವೆಂಬರ್ ಒಂದರಿಂದ ಶಾಲೆಗಳು ಪೂರ್ತಿ ದಿನ ನಡೆಯಲಿವೆ. ಪೋಷಕರು ಯಾರೂ ಆತಂಕಪಡುವ ಅಗತ್ಯ ಇಲ್ಲ. ಎರಡು ಡೋಸ್ ಆದ ಶಿಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸರ್ವ ಸಿದ್ಧತೆಗಳು ಆಗಿವೆ. ಮಾಸ್ಕ್, ಸುರಕ್ಷತಾ ಅಂತರ, ಸ್ಯಾನಿಟೈಸ್ ವ್ಯವಸ್ಥೆ ಕಡ್ಡಾಯ ಮಾಡಲಾಗಿದೆ ಎಂದು ಡಿಡಿಪಿಐ ಎಚ್ ಎನ್ ನಾಗೂರ, ಮಕ್ಕಳ ಪೋಷಕರಿಗೆ ಭರವಸೆ ನೀಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X