ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ಬಿಎಸ್ ಎಫ್ ಕಾನ್ ಸ್ಟೇಬಲ್ ಬಂಧನ

ಕಚ್(ಗುಜರಾತ್): ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ ಆರೋಪದಲ್ಲಿ ಗುಜರಾತ್ ಭಯೋತ್ಪಾದಕ ವಿರೋಧಿ ತಂಡ(ಎಟಿಎಸ್)ಗುಜರಾತ್ ನ ಕಚ್ ಜಿಲ್ಲೆಯ ಗಾಂಧಿಧಾಮ್ ನಿಂದ ಗಡಿ ಭದ್ರತಾ ಪಡೆಯ(ಬಿಎಸ್ ಎಫ್)ಕಾನ್ ಸ್ಟೇಬಲ್ ವೊಬ್ಬರನ್ನು ಸೋಮವಾರ ಬಂಧಿಸಿದೆ.
ಜಮ್ಮು-ಕಾಶ್ಮೀರದ ರಾಜೌರಿ ನಿವಾಸಿ ಬಿಎಸ್ ಎಫ್ ಕಾನ್ ಸ್ಟೇಬಲ್ ಮುಹಮ್ಮದ್ ಸಜ್ಜಾದ್ ನನ್ನು ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ಆರೋಪದ ಮೇಲೆ ಗಾಂಧಿಧಾಮ್ ನಲ್ಲಿ ಬಂಧಿಸಲಾಗಿದೆ ಎಂದು ಎಟಿಎಸ್ ಉಪ ಎಸ್ಪಿ ಬಿ.ಎ.ಚವ್ಡಾ ಹೇಳಿದ್ದಾರೆ.
ಸಜ್ಜಾದ್ ಬಿಎಸ್ ಎಫ್ ಗೆ ಸೇರುವ ಮೊದಲು ಪಾಕಿಸ್ತಾನಕ್ಕೆ ತೆರಳಿ 46 ದಿನಗಳ ಕಾಲ ಅಲ್ಲಿ ನೆಲೆಸಿದ್ದ. ಮಾಹಿತಿಯನ್ನು ರವಾನಿಸಲು ವ್ಯಾಟ್ಸ್ ಆ್ಯಪ್ ಬಳಸುತ್ತಿದ್ದ ಎಂದು ಅವರು ಹೇಳಿದರು.
Next Story