ಟ್ವೆಂಟಿ-20 ವಿಶ್ವಕಪ್:ವಿಂಡೀಸ್ ವಿರುದ್ಧ ದ.ಆಫ್ರಿಕಾಕ್ಕೆ ಗೆಲುವು

photo: icc
ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಗ್ರೂಪ್-1ರ 18ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ದ 8 ವಿಕೆಟ್ ಗಳಿಂದ ಗೆಲುವು ದಾಖಲಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ಗೆಲ್ಲಲು 144 ರನ್ ಗುರಿ ಬೆನ್ನಟ್ಟಿದ ದ.ಆಫ್ರಿಕಾ 18.2 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.
ಏಡೆನ್ ಮರ್ಕರಮ್ (51, 26 ಎಸೆತ, 2 ಬೌಂಡರಿ, 4 ಸಿಕ್ಸರ್) ರಾಸ್ಸಿ ವಾಂಡರ್ ಡಸ್ಸನ್(43, 51 ಎಸೆತ, 3 ಬೌಂಡರಿ)ಹಾಗೂ ರೀಝಾ ಹೆಂಡ್ರಿಕ್ಸ್(39, 30 ಎಸೆತ, 4 ಬೌಂ.1 ಸಿ.) ಆಫ್ರಿಕದ ಗೆಲುವಿನ ಹಾದಿ ಸುಗಮಗೊಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡ ಡ್ವೆಯ್ನ್ ಪ್ರಿಟೋರಿಯಸ್(3-17), ಕೇಶವ ಮಹಾರಾಜ್(2-24) ದಾಳಿಗೆ ಸಿಲುಕಿ 8 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ವಿಂಡೀಸ್ ಪರವಾಗಿ ಆರಂಭಿಕ ಬ್ಯಾಟ್ಸ್ ಮನ್ ಎವಿನ್ ಲೆವಿಸ್(56, 35 ಎಸೆತ, 3 ಬೌಂ.6 ಸಿ.)ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ಪೊಲಾರ್ಡ್(26), ಸಿಮ್ಮನ್ಸ್(16) ಒಂದಷ್ಟು ಹೋರಾಟ ನೀಡಿದರು.
4 ಓವರ್ ಗಳಲ್ಲಿ ಕೇವಲ 14 ರನ್ ನೀಡಿ 1 ವಿಕೆಟ್ ಪಡೆದ ದ. ಆಫ್ರಿಕಾದ ಅನ್ರಿಚ್ ನೋಟ್ಜೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.