ಟ್ವೆಂಟಿ-20 ವಿಶ್ವಕಪ್: ಪಾಕಿಸ್ತಾನದ ಗೆಲುವಿಗೆ 135 ರನ್ ಗುರಿ ನೀಡಿದ ನ್ಯೂಝಿಲ್ಯಾಂಡ್

photo: AP
ಶಾರ್ಜಾ: ಹಾರಿಸ್ ರವೂಫ್ ನೇತೃತ್ವದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಝಿಲ್ಯಾಂಡ್ ಟ್ವೆಂಟಿ-20 ವಿಶ್ವಕಪ್ ನ ಗ್ರೂಪ್-2ರ 19ನೇ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವಿಗೆ 135 ರನ್ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲ್ಯಾಂಡ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಿವೀಸ್ ಪರವಾಗಿ ಡಿವೊನ್ ಕಾನ್ವೇ (27) ಹಾಗೂ ಮಿಚೆಲ್(27) ಗರಿಷ್ಟ ವೈಯಕ್ತಿಕ ಸ್ಕೋರ್ ಗಳಿಸಿದರು. ನಾಯಕ ಕೇನ್ ವಿಲಿಯಮ್ಸನ್ 25, ಗಪ್ಟಿಲ್ 17 ಹಾಗೂ ಗ್ಲೆನ್ ಫಿಲಿಪ್ಸ್ 13 ರನ್ ಗಳಿಸಿದರು.
ಪಾಕ್ ಪರವಾಗಿ ರವೂಫ್(4-22) ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಹಫೀಝ್(1-16),ಶಾಹೀನ್ ಅಫ್ರಿದಿ(1-21), ವಸೀಂ(1-24) ತಲಾ ಒಂದು ವಿಕೆಟ್ ಗಳನ್ನು ಪಡೆದರು.
Next Story





