ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸಹಿತ 11 ಕ್ರೀಡಾಪಟುಗಳ ಹೆಸರು 'ಖೇಲ್ ರತ್ನ' ಪ್ರಶಸ್ತಿಗೆ ಶಿಫಾರಸು
photo: indian express
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಬೆಳ್ಳಿ ಪದಕ ವಿಜೇತ ಕುಸ್ತಿಪಟು ರವಿ ದಹಿಯಾ ಸಹಿತ ಒಟ್ಟು 11 ಕ್ರೀಡಾಪಟುಗಳನ್ನು ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ 'ಖೇಲ್ ರತ್ನ' ಪ್ರಶಸ್ತಿಗೆ ಬುಧವಾರ ಶಿಫಾರಸು ಮಾಡಲಾಗಿದೆ.
ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್, ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ, ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್, ಹಾಕಿ ಆಟಗಾರ ಪಿ.ಆರ್. ಶ್ರೀಜೇಶ್ ಅವರನ್ನು 'ಖೇಲ್ ರತ್ನ' ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 'ಖೇಲ್ ರತ್ನ' ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಐವರು ಪ್ಯಾರಾ ಅಥ್ಲೀಟ್ಗಳ ಪೈಕಿ ಪ್ಯಾರಾಲಿಂಪಿಕ್ಸ್ ಶೂಟರ್ ಅವನಿ ಲೆಖರಾ ಕೂಡ ಸೇರಿದ್ದಾರೆ.
'ಅರ್ಜುನ' ಪ್ರಶಸ್ತಿಗೆ ನಾಮನಿರ್ದೇಶನಗೊಂಡ 35 ಅಥ್ಲೀಟ್ಗಳಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಸೇರಿದ್ದಾರೆ.
'ಖೇಲ್ ರತ್ನ' ಪ್ರಶಸ್ತಿಗೆ ಶಿಫಾರಸು ಮಾಡಲಾದ 11 ಭಾರತೀಯ ಕ್ರೀಡಾಪಟುಗಳ ಪಟ್ಟಿ ಇಲ್ಲಿದೆ:
- ನೀರಜ್ ಚೋಪ್ರಾ (ಅಥ್ಲೆಟಿಕ್ಸ್)
- ರವಿ ದಹಿಯಾ (ಕುಸ್ತಿ)
- ಪಿ.ಆರ್. ಶ್ರೀಜೇಶ್ (ಹಾಕಿ)
- ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್)
- ಸುನೀಲ್ ಚೆಟ್ರಿ (ಫುಟ್ಬಾಲ್)
- ಮಿಥಾಲಿ ರಾಜ್ (ಕ್ರಿಕೆಟ್)
- ಪ್ರಮೋದ್ ಭಗತ್ (ಬ್ಯಾಡ್ಮಿಂಟನ್)
- ಸುಮಿತ್ ಆಂಟಿಲ್ (ಜಾವೆಲಿನ್)
- ಅವನಿ ಲೇಖರ (ಶೂಟಿಂಗ್)
- ಕೃಷ್ಣ ನಗರ್ (ಬ್ಯಾಡ್ಮಿಂಟನ್)
- ಎಂ. ನರ್ವಾಲ್ (ಶೂಟಿಂಗ್)
ಖೇಲ್ ರತ್ನವನ್ನು ಈ ಹಿಂದೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಹಾಕಿಯಲ್ಲಿ ಭಾರತದ ದಾಖಲೆ ಪ್ರದರ್ಶನದ ನಂತರ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಲೆಜೆಂಡರಿ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಹೆಸರಿಟ್ಟು ಮರುನಾಮಕರಣ ಮಾಡಿದ್ದರು.