ಕೊಳ್ಳೇಗಾಲ : ಟ್ರ್ಯಾಕ್ಟರ್ ಪಲ್ಟಿ; ಸ್ಥಳದಲ್ಲೇ ಓರ್ವ ಮೃತ್ಯು
ಕೊಳ್ಳೇಗಾಲ: ಭತ್ತದ ಗದ್ದೆಯಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ (ಗೇಜ್ ವೀಲ್) ಪಲ್ಟಿಯಾದ ಪರಿಣಾಮ ರೈತನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ರಸ್ತೆಯ ಜಮೀನಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ಪ್ರಕಾಶ್ (43) ಮೃತಪಟ್ಟ ದುರ್ದೈವಿ. ಗುಂಡಾಲ್ ಜಲಾಶಯದ ರಸ್ತೆಯಲ್ಲಿನ ತನ್ನ ಭತ್ತದ ಗದ್ದೆಯಲ್ಲಿ ಉಳುಮೆ ಮಾಡುವಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ತಲೆ ಮತ್ತು ಮುಖಕ್ಕೆ ತೀವ್ರ ಪೆಟ್ಟಾಗಿದ್ದರಿಂದ ಕೆಸರು ಗದ್ದೆಯಲ್ಲೇ ಅಸುನೀಗಿದ್ದಾರೆ ಎನ್ನಲಾಗಿದೆ.
ಸಂಜೆಯಾದರೂ ಪ್ರಕಾಶ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಜಮೀನಿಗೆ ತೆರಳಿ ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story