ವಿಶ್ವಕಪ್ :ಸ್ಕಾಟ್ಲೆಂಡ್ ಗೆ ಸೋಲುಣಿಸಿದ ನಮೀಬಿಯ

photo: twitter
ಅಬುಧಾಬಿ, ಅ.27: ಐಸಿಸಿ ಟ್ವೆಂಟಿ-20 ವಿಶ್ವಕಪ್ ನ ಗ್ರೂಪ್-2ರ 21ನೇ ಪಂದ್ಯದಲ್ಲಿ ನಮೀಬಿಯಾ ತಂಡ ಸ್ಕಾಟ್ಲೆಂಡ್ ವಿರುದ್ಧ 4 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಸ್ಕಾಟ್ಲೆಂಡ್ ಸತತ ಎರಡನೇ ಪಂದ್ಯದಲ್ಲಿ ಸೋಲನುಭವಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 110 ರನ್ ಗುರಿ ಪಡೆದ ನಮೀಬಿಯ 19.1 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ನಮೀಬಿಯಕ್ಕೆ ಆರಂಭಿಕ ಬ್ಯಾಟ್ಸ್ ಮನ್ ಕ್ರೆಗ್ ವಿಲಿಯಮ್ಸ್ (23), ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಜೆ.ಜೆ. ಸ್ಮಿತ್(ಔಟಾಗದೆ 32, 23 ಎಸೆತ), ಮೈಕಲ್ ವಾನ್ (18) ಹಾಗೂ ಡೇವಿಡ್ ವೈಸ್(16) ಎರಡಂಕೆಯ ಸ್ಕೋರ್ ಗಳಿಸಿದರು.
ಸ್ಕಾಟ್ಲೆಂಡ್ ನ ಬೌಲಿಂಗ್ ವಿಭಾಗದಲ್ಲಿ ಮೈಕಲ್ ಲಿಸ್ಕ್(2-12) ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಸ್ಕಾಟ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು.
ಮೈಕಲ್ ಲಿಸ್ಕ್(44,27 ಎಸೆತ) ಸರ್ವಾಧಿಕ ಸ್ಕೋರ್ ಗಳಿಸಿದರು. ನಮೀಬಿಯ ಪರ ರುಬೆನ್ ಟ್ರಂಪೆಲ್ಮನ್ (3-17) ಮೂರು ವಿಕೆಟ್ ನಿಂದ ಮಿಂಚಿದರು. ಪಂದ್ಯಶ್ರೇಷ್ಟ ಗೌರವವನ್ನು ಪಡೆದರು.