ವಾಕ್ ಸ್ವಾತಂತ್ರಕ್ಕೆ ಬೆಲೆಯೆಲ್ಲಿ?
ಮಾನ್ಯರೇ,
ಇತ್ತೀಚೆಗೆ ಲಖಿಂಪುರದಲ್ಲಿ ನಡೆದ ರೈತರ ಬರ್ಬರ ಹತ್ಯೆಯ ಬೆನ್ನಲ್ಲೇ, ದಿಲ್ಲಿಯಲ್ಲಿ ಪ್ರತಿಭಟನಾ ನಿರತ ಮಹಿಳಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ಬೆಳವಣಿಗೆಗಳು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ಪ್ರತಿ ಪ್ರಜೆಯಲ್ಲೂ ಆತಂಕ ಹುಟ್ಟಿಸುವ ವಿಷಯಗಳಾಗಿವೆ. ಪ್ರತಿಭಟನೆ ನಡೆಸಿದರೆ, ಕಾರನ್ನು ಜನರ ಮೇಲೆ ಓಡಿಸಲಾಗುತ್ತದೆ. ಒಟ್ಟಾಗಿ ಸೇರಿದರೆ ಲಾಠಿ ಬೀಸಲಾಗುತ್ತದೆ. ಹಾಗಾದರೆ, ಗಾಂಧೀಜಿಯವರಿಂದ ಕಲಿತ ಶಾಂತಿಯುತ ಪ್ರತಿಭಟನೆಗೆ ಸರಕಾರ ನೀಡುತ್ತಿರುವ ಬೆಲೆ ಏನು? ಇದು ನಮ್ಮ ಜನತೆಯ ವಾಕ್ ಸ್ವಾತಂತ್ರಕ್ಕೆ ಆಗುತ್ತಿರುವ ಧಕ್ಕೆಯಲ್ಲವೇ?
ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತು, ಬೆಲೆಯೇರಿಕೆ, ದೌರ್ಜನ್ಯದ ವಿರುದ್ಧ ದನಿಯೆತ್ತುವ ಜನಸಾಮಾನ್ಯರಿಗೆ ಸುರಕ್ಷತೆಯನ್ನು ಕಲ್ಪಿಸಬೇಕು ಅಥವಾ ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಬೇಕು.
Next Story





