ಹಿಂದುತ್ವ ಸಂಘಟನೆಗಳಿಂದ ಬೆದರಿಕೆ: ಮೂರು ಕಾರ್ಯಕ್ರಮಗಳನ್ನು ರದ್ದುಪಡಿಸಿದ ಮುನವ್ವರ್ ಫಾರೂಕಿ

Twitter screengrab/Munawar Faruqui
ಹೊಸದಿಲ್ಲಿ: ಸಂಘಟಕರಿಗೆ ಹಿಂದುತ್ವ ಗುಂಪುಗಳು ಬೆದರಿಕೆ ಹಾಕಿದ ಪರಿಣಾಮ ಕಾಮೆಡಿಯನ್ ಮುನವ್ವರ್ ಫಾರೂಕಿ ಹೊಸದಿಲ್ಲಿಯಲ್ಲಿನ ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ. ಈ ಕುರಿತು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಹಿಂದುತ್ವ ಸಂಘಟನೆಗಳು ಕಾರ್ಯಕ್ರಮ ರದ್ದುಪಡಿಸಲು ಆನ್ ಲೈನ್ ಅಭಿಯಾನವನ್ನೂ ನಡೆಸಿದ್ದು, ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಮುಂಬೈ ಪೊಲೀಸರನ್ನು ಆಗ್ರಹಿಸಿದ್ದರು.
"ಸಭಿಕರ ಸುರಕ್ಷತೆಗೆ ನಾನು ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ" ಎಂದು ಟ್ವಿಟರ್ ನಲ್ಲಿ ತಿಳಿಸಿದ ಮುನವ್ವರ್ ಫಾರೂಕಿ, "ನಾನು ಏನನ್ನು ಅನುಭವಿಸುತ್ತಿದ್ದೇನೆಯೋ ಅದನ್ನು ನನ್ನ ವೀಕ್ಷಕರೂ ಅನುಭವಿಸುವುದು ನನಗೆ ಇಷ್ಟವಿಲ್ಲ" ಎಂದು ಅವರು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಬಿಜೆಪಿ ನಾಯಕನ ಪುತ್ರನೋರ್ವ ನೀಡಿದ ದೂರಿನ ಆಧಾರದ ಮೇಲೆ ಮಧ್ಯಪ್ರದೇಶದ ಇಂಧೋರ್ ನಗರದಲ್ಲಿ ಕಾರ್ಯಕ್ರಮದ ನಡುವೆ ಮುನವ್ವರ್ ಫಾರೂಖಿಯನ್ನು ಬಂಧಿಸಲಾಗಿತ್ತು. ಅಂದಿನಿಂದ ಹಿಂದುತ್ವ ಸಂಘಟನೆಗಳು ಮುನವ್ವರ್ ರನ್ನು ಗುರಿಯಾಗಿಸಿಕೊಂಡಿದೆ ಎಂದು scroll.in ವರದಿ ಮಾಡಿದೆ.
— munawar faruqui (@munawar0018) October 27, 2021