ಗಾಂಜಾ ಪತ್ತೆಹಚ್ಚಲು ಜನರ ಫೋನ್ ಪರಿಶೀಲನೆ ಪ್ರಾರಂಭಿಸಿದ ಹೈದರಾಬಾದ್ ಪೊಲೀಸರು !

ಹೊಸದಿಲ್ಲಿ: ಯಾರಾದರೂ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದಾರೆಯೋ? ಅಥವಾ ಮಾದಕ ವಸ್ತುಗಳನ್ನು ಬಳಸುತ್ತಿರುವ ಕುರಿತು ತಿಳಿಯಲು ದಾರಿಯಲ್ಲಿ ತೆರಳುತ್ತಿರುವ ಜನರ ಮೊಬೈಲ್ ಫೋನ್ ಗಳನ್ನು ಪೊಲೀಸರು ಪರಿಶೀಲಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಗಾಂಜಾವನ್ನು ಸಂಪೂರ್ಣವಾಗಿ ನಗರದಿಂದ ನಿರ್ಮೂಲನೆ ಮಾಡುವ ಸಲುವಾಗಿ ಈ ʼರೈಡ್ʼ ಅನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾಗಿ newsminute.com ವರದಿ ಮಾಡಿದೆ.
ನಗರದಲ್ಲಿ ಗಾಂಜಾ ಬಳಕೆ ಮತ್ತು ಮಾರಾಟ ಮಾಡುತ್ತಿರುವವರ ವಿರುದ್ಧ ರೈಡ್ ನಡೆಸುವಂತೆ ಹಾಗೂ ಪರಿಶೀಲನೆ ನಡೆಸುವಂತೆ ಪೊಲೀಸ್ ಕಮಿಷನರ್ ಸೂಚನೆ ನೀಡಿದ ಬಳಿಕ ಪೊಲೀಸರು ಈ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಪೊಲೀಸರು ಮೊಬೈಲ್ ಫೋನ್ ಗಳನ್ನು ಪರಿಶೀಲಿಸುವ ವೇಳೆ ಜನರ ಚಾಟ್ ಗಳನ್ನೂ ಶೋಧಿಸಿದ್ದು, ಅದರಲ್ಲಿ ಗಾಂಜಾಗೆ ಸಂಬಂಧಿಸಿದ ಪದಗಳ ಕುರಿತು ಅನ್ವೇಷನೆ ನಡೆಸಿದ್ದಾರೆ ಎಂದು ಜನರು ಆರೋಪಿಸಿದ್ದಾಗಿ ವರದಿ ತಿಳಿಸಿದೆ.
ಮೊಬೈಲ್ ಫೋನ್ ಗಳ ಪರಿಶೀಲನೆ ನಡೆಸಿದ ಕುರಿತು ಪೊಲೀಸರಿಗೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಜನರು ತಮ್ಮ ಫೋನ್ ಗಳನ್ನು ನೀಡದೆಯೂ ಇರಬಹುದಾಗಿದೆ. ಎಲ್ಲರೂ ಪೊಲೀಸರೊಂದಿಗೆ ಸಹಕರಿಸಿದ್ದಾರೆ. ಯಾರೂ ಯಾವುದರ ಬಗ್ಗೆಯೂ ದೂರು ಸಲ್ಲಿಸಿಲ್ಲ ಎಂದು ಡೆಪ್ಯುಟಿ ಪೊಲೀಸ್ ಕಮಿಶನರ್ ಗಜರಾವ್ ಭೂಪಾಲ್ ತಿಳಿಸಿದ್ದಾಗಿ ವರದಿ ಬೆಟ್ಟು ಮಾಡಿದೆ.
#Hyderabad police check phones of youth for keyword ‘ganja’. The searches are without warrant or cause. @TheQuint pic.twitter.com/ombO2FJMoM
— Nikhila Henry (@NikhilaHenry) October 28, 2021