ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಹೆಬ್ರಿ, ಅ.28 ಅನಾರೋಗ್ಯದಿಂದ ಮಾನಸಿಕವಾಗಿ ನೊಂದ ನಾಡ್ಪಾಲು ಗ್ರಾಮದ ಸೋಮೇಶ್ವರದ ಕೆಳ ಅರಸಿನ ನಿವಾಸಿ ಜಲಜ ಶೆಡ್ತಿ ಎಂಬವರ ಮಗ ನಿತ್ಯಾನಂದ ಶೆಟ್ಟಿ(44) ಎಂಬವರು ಅ.27ರಂದು ರಾತ್ರಿ ಮನೆಯಲ್ಲಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಮಕ್ಕಳಾಗದ ಚಿಂತೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಗಿಳಿಯಾರು ಗ್ರಾಮದ ಹಾಡಿಕೆರೆ ನಿವಾಸಿ ಕೇಶವ ಆಚಾರ್ಯ ಎಂಬವರ ಪತ್ನಿ ಜ್ಞಾನೇಶ್ವರಿ(39) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಅ.27ರಂದು ರಾತ್ರಿ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





