ಶ್ರೀ ಚಂದ್ರಶೇಖರ ಸ್ವಾಮೀಜಿ ಪುತ್ರಿಯ ಅದ್ದೂರಿ ವಿವಾಹ: ಸಿಎಂ ಸಹಿತ ಗಣ್ಯರು ಭಾಗಿ

ಬೆಂಗಳೂರು, ಅ.29: ಧಾರ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ, ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಹಾಗೂ ರಜನಿ ಭಟ್ ದಂಪತಿಯ ಪುತ್ರಿ ರೋಶನಿ ಹಾಗೂ ರಾಘವ ಸೂರ್ಯ ಅವರ ವಿವಾಹವು ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರ ಮಾಣಿಕ್ಯದಲ್ಲಿ ಅದ್ದೂರಿಯಾಗಿ ನೆರವೇರಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಚಿವ ಡಾ.ಸುಧಾಕರ್, ಕಾಂಗ್ರೆಸ್ ನಾಯಕ ಈಶ್ಚರ ಖಂಡ್ರೆ, ಸಂಸದೆ ಸುಮಲತಾ ಅಂಬರೀಷ್, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಕುಮಾರ್ ಬಂಗಾರಪ್ಪ, ಮಾಜಿ ಸಚಿವ ಎಚ್.ವಿಶ್ವನಾಥ್, ಶಾಸಕ ಝಮೀರ್ ಅಹ್ಮದ್, ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕೇಂದ್ರ ಮಾಜಿ ಗೃಹ ಸಚಿವ ಸುಬೋದ್ ಕಾಂತ್ ಸಹಾಯ್, ಅಲ್ ಇಂಡಿಯಾ ಆ್ಯಂಟಿ ಟೆರರಿಸ್ಟ್ ಫ್ರಂಟ್‌ನ ಅಧ್ಯಕ್ಷ ಎಂ.ಎಸ್. ಬಿಟ್ಟಾ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಶಾಸಕರಾದ ಸುಕುಮಾರ್ ಶೆಟ್ಟಿ, ಉಮಾನಾಥ ಕೋಟ್ಯಾನ್ , ಜೆಡಿಎಸ್ ಮುಖಂಡ ಕಾಪು ಯೋಗೀಶ್ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ಚಲನಚಿತ್ರ ನಟರಾದ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಉಪೇಂದ್ರ, ರಾಕ್‌ಲೈನ್ ವೆಂಕಟೇಶ್, ರಮೇಶ್ ಅರವಿಂದ್, ಅನು ಪ್ರಭಾಕರ್, ಸಂಗೀತ ನಿರ್ದೇಶಕ ಹಂಸಲೇಖ, ಗಿರೀಜಾ ಲೋಕೇಶ್, ವಿಜಯಲಕ್ಷ್ಮಿ ಸಿಂಗ್, ರಾಜೇಂದ್ರ ಸಿಂಗ್ ಬಾಬು, ಸಿಹಿಕಹಿ ಚಂದ್ರು, ಮಾಲಶ್ರೀ, ಕರ್ನಾಟಕ ಉಚ್ಚ ನ್ಯಾಯಾಲಯ, ಸೇರಿದಂತೆ ತೆಲಂಗಾಣ, ತ್ರಿಪುರ, ಗುಜರಾತ್, ಪಂಜಾಬ್, ತಮಿಳುನಾಡು ರಾಜ್ಯದ ನ್ಯಾಯಮೂರ್ತಿಗಳು ಭಾಗವಹಿಸಿ ನೂತನ ವಧೂವರರಿಗೆ ಶುಭ ಕೋರಿದರು.
ಅರಮನೆಯ ಶೈಲಿಯಲ್ಲಿ ಮಂಟಪವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದ್ದ ಮದುವೆಯ ವೇದಿಕೆಯಲ್ಲಿ ಆಕರ್ಷಕವಾಗಿತ್ತು. ಸಾಂಪ್ರದಾಯಿಕ ಶೈಲಿಯಲ್ಲಿ ವೇದಘೋಷದೊಂದಿಗೆ ಮದುವೆಯನ್ನು ಆಯೋಜಿಸಲಾಗಿತ್ತು. ಪ್ರತಿಯೊಬ್ಬ ಅತಿಥಿಗಳನ್ನು ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಲಾಯಿತು. ಇದಕ್ಕಾಗಿ ಯಕ್ಷಗಾನ ಕಲಾವಿದರ ವಿಶೇಷ ತಂಡವನ್ನು ನಿಯೋಜಿಸಲಾಗಿತ್ತು. ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಖುದ್ದು ಅತಿಥಿಗಳ ಸಭಾ ಮರ್ಯಾದೆಯ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಇನ್ನಷ್ಟು ಮೆರುಗೆ ದೊರೆಯಿತು.
ಕರಾವಳಿಯ ವಿಶೇಷ ತಿನಿಸುಗಳಲ್ಲಿ ಖ್ಯಾತಿ ಪಡೆದ ಅಡ್ವೆ ಕೃಷ್ಣ ಭಟ್ ನೇತೃತ್ವದಲ್ಲಿ ವಿಶೇಷ ಪಾಕತಜ್ಞರ ತಂಡವು ಕರಾವಳಿಯ ಹಾಗೂ ದೇಶದ ನಾನಾ ಭಾಗದ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಿದ್ದರು.








