ಪುನೀತ್ ರಾಜ್ ಕುಮಾರ್ ನಿಧನ: ಎರಡು ದಿನ ಭದ್ರಾವತಿ ಬಂದ್ ಗೆ ಅಭಿಮಾನಿಗಳ ಕರೆ

ಶಿವಮೊಗ್ಗ: ಕನ್ನಡ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್(46 ವರ್ಷ) ಅವರ ನಿಧನದ ಹಿನ್ನೆಲೆ ಇಂದು ಹಾಗೂ ನಾಳೆ ಭದ್ರಾವತಿ ಬಂದ್ ಗೆ ಡಾ.ರಾಜ್ ಕುಮಾರ್ ಅಭಿಮಾನಿ ಸಂಘ ಕರೆ ನೀಡಿದೆ.
ಪುನೀತ್ ರಾಜ್ ಕುಮಾರ್ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಮುಚ್ಚಿದ್ದಾರೆ. ತಮ್ಮ ನೆಚ್ಚಿನ ನಟನ ನಿಧನಕ್ಕೆ ಭದ್ರಾವತಿ ಮುಖ್ಯರಸ್ತೆಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಬೇಸರ ವ್ಯಕ್ತಪಡಿಸಿದ್ದಾರೆ.
Next Story





