ಟೇಕ್ವಾಂಡೋ ಚಾಂಪಿಯನ್ ಶಿಪ್: ರೈಫಾನ್ ಅಹ್ಮದ್ 'ಮಿಸ್ಟರ್ ದಕ್ಷಿಣ ಕನ್ನಡ'

ಮಂಗಳೂರು, ಅ.29: ದ.ಕ. ಟೇಕ್ವಾಂಡೋ ಅಸೋಸಿಯೇಶನ್ ಹಾಗೂ ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜು ವತಿಯಿಂದ ಅಲೋಸಿಯಸ್ ಕಾಲೇಜು ಕ್ರೀಡಾಂಗಣದಲ್ಲಿ ಅ.28ರಂದು ಜರುಗಿದ ಮಿಸ್ಟರ್ ದ.ಕ. ಜಿಲ್ಲಾ ಮಟ್ಟದ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ 54 ಕೆ.ಜಿ. ಒಳಗಿನ ವಿಭಾಗದಲ್ಲಿ ರೈಫಾನ್ ಅಹ್ಮದ್ ವಿಜೇತರಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಿ.ಸಿ. ರೋಡು ಕಾರ್ಮೆಲ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ಕಾಮರ್ಸ್ ವಿದ್ಯಾರ್ಥಿಯಾಗಿರುವ ರೈಫಾನ್, ಪ್ರಾಥಮಿಕ ಶಾಲಾ ಹಂತದಿಂದಲೇ ವಿವಿಧ ಟೇಕ್ವಾಂಡೋ ಕ್ರೀಡಾಕೂಟದಲ್ಲಿ ಭಾಗವಹಿಸಿ, ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕೈಕಂಬ ಶಾಂತಿಅಂಗಡಿ ನಿವಾಸಿ ಮುಹಮ್ಮದ್ ರಫೀಕ್ ಹಾಗೂ ರೊಹರಾ ದಂಪತಿಯ ಪುತ್ರನಾಗಿರುವ ರೈಫಾನ್ ಅಹ್ಮದ್, ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಮ್ ಮತ್ತು ಮಾರ್ಶಲ್ ಆರ್ಟ್ಸ್‌ನ ಕೋಚ್ ಇಸಾಕ್ ಇಸಾಯೀಲ್‌ರಿಂದ ತರಬೇತಿ ಪಡೆಯುತ್ತಿದ್ದಾರೆ.
Next Story





