ದೇರಳಕಟ್ಟೆ: ಅ.31ರಂದು ಹಲೀಮಾ ಬಾವಾಸ್‌ನ ಬಿ-ಮಾರ್ಟ್ ಶಾಪಿಂಗ್ ಮಾರ್ಟ್‌ನ ಉದ್ಘಾಟನೆ
ಮಂಗಳೂರು, ಅ.29: ದೇರಳಕಟ್ಟೆಯ ಯೆನೆಪೊಯ ವಿವಿಯ ಎದುರು ಹಲೀಮಾ ಬಾವಾಸ್‌ನ ಬಿ-ಮಾರ್ಟ್ ಶಾಪಿಂಗ್ ಮಾರ್ಟ್‌ನ ಉದ್ಘಾಟನೆಯು ಅ.31ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಶಾಪಿಂಗ್ ಮಾರ್ಟ್ ಅನ್ನು ಕರ್ನಾಟಕ ಸ್ವಾ ಮಿಲ್‌ನ ಎಂ.ಡಿ. ಕೆ.ಎಂ.ಅಬ್ದುಲ್ಲಾ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಯು.ಟಿ.ಖಾದರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಲ್ವಿನ್ ಡಿಸೋಜ, ಇಂಟಕ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಮಲ್ಲಿ, ಯೆನೆಪೊಯ ಮೆಡಿಕಲ್ ಕಾಲೇಜಿನ ಫೈನಾನ್ಸ್ ಇನ್ಚಾರ್ಜ್ ಫರಾಝ್, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ರಶೀದ್ ಹಾಜಿ, ಬೆಳ್ಮ ಕೊರಗಜ್ಜ ಸೇವಾ ಸಮಿತಿಯ ರವಿ ಪೂಂಜಾ, ಬೆಳ್ಮ ಗ್ರಾಪಂ ಅಧ್ಯಕ್ಷ ಸತ್ತಾರ್, ಸದಸ್ಯ ರಝಾಕ್, ಪಿಡಿಒ ನವೀನ್ ಹೆಗ್ಡೆ, ಡೀಲ್ ಗ್ರೂಪ್‌ನ ಆಸಿಫ್ ಅಹ್ಮದ್, ಮಾಜಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಎನ್ ಮಾರ್ಕ್ ಬಿಲ್ಡರ್‌ನ ನೂರ್ ಮುಹಮ್ಮದ್, ಶಾಂತಿಭಾಗ್ ದಾರುಸ್ಸಲಾಂ ಜುಮಾ ಮಸ್ಜಿದ್‌ನ ಅಧ್ಯಕ್ಷ ಮುಹಮ್ಮದ್ ಪರಪ್ಪು, ಐ ಡೆಕೋರ್ ಫರ್ನಿಶಿಂಗ್ ಆ್ಯಂಡ್ ಇಂಟೀರಿಯರ್‌ನ ಎಂ.ಡಿ. ಎಚ್.ಹಕೀಂ ಭಾಗವಹಿಸಲಿದ್ದಾರೆ.
ಬಿ-ಮಾರ್ಟ್ ಶಾಪಿಂಗ್ ಮಾರ್ಟ್‌ನಲ್ಲಿ ಬೇಕರಿ, ಹೌಸ್ ಹೋಲ್ಡ್, ಜನರಲ್ ಸ್ಟೋರ್ಸ್, ಮೊಬೈಲ್, ಸಲೂನ್, ರೆಡಿಮೇಡ್, ಟೈಲರ್, ಫ್ಯಾನ್ಸಿ ಅಂಗಡಿಗಳು ಕಾರ್ಯಾಚರಿಸಲಿವೆ. ಅಲ್ಲದೆ ಸೌತ್ ಇಂಡಿಯನ್, ಅರೇಬಿಯನ್, ಚೈನೀಸ್ ದಾವಣಗೆರೆ ಫುಡ್ ಸಹಿತ ಪಿಝ್ಝ, ಫ್ರೈಡ್ ಚಿಕನ್, ಫ್ರೆಸ್ ಜ್ಯೂಸ್‌ಗಳ ಫುಡ್ ಕೋರ್ಟ್ ಇರಲಿವೆ ಎಂದು ಪ್ರಕಟನೆ ತಿಳಿಸಿದೆ.





