ಉಡುಪಿ: ತ್ರಿಪುರಾದಲ್ಲಿ ಮುಸ್ಲಿಮರ ಮೇಲಿನ ದಾಳಿ ಖಂಡಿಸಿ ಪಿಎಫ್‌ಐ ಪ್ರತಿಭಟನೆ

ಉಡುಪಿ, ಅ.29: ತ್ರಿಪುರಾದಲ್ಲಿ ಸರಕಾರಿ ಪ್ರೇರಿತ ಮುಸ್ಲಿಮರ ಮೇಲಿನ ದಾಳಿ ಖಂಡಿಸಿ ಹಾಗೂ ಹಿಂಸಾಚಾರ ನಿಲ್ಲಿಸಿ, ಅಪರಾಧಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಇಂದು ಅಜ್ಜರಕಾಡಿನಲ್ಲಿರುವ ಹುತಾತ್ಮರ ಸ್ಮಾರಕ ಭವನದ ಬಳಿ ಪ್ರತಿಭಟನೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಪಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷ ಫಯಾಜ್ ಅಹ್ಮದ್, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಮುಖಂಡ ಹನೀಫ್ ಮೂಳೂರು ಮಾತನಾಡಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಪ್ರದಾನ ಕಾರ್ಯ ದರ್ಶಿ ಖಲೀಲ್, ಪಿಎಫ್‌ಐ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅಬ್ದುಲ್ ಶುಕೂರ್ ಮಲ್ಪೆಮೊದಲಾದವರು ಉಪಸ್ಥಿತರಿದ್ದರು. ಮುಜ್ಜಿತಬ ಕಾಪು ಕಾರ್ಯಕ್ರಮ ನಿರೂಪಿಸಿದರು. ಶಫೀಕ್ ವಂದಿಸಿದರು.
Next Story





