ಹಾನಗಲ್, ಸಿಂದಗಿ ಉಪ ಚುನಾವಣೆ: ಮಂದಗತಿಯಲ್ಲಿ ಸಾಗಿದ ಮತದಾನ
ಬೆಂಗಳೂರು, ಅ.30: ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ ಮತದಾನ ಮಂದಗತಿಯಲ್ಲಿ ಸಾಗಿದ್ದು, 113:30ರ ವೇಳೆ ಒಟ್ಟು ಶೇ.25.61 ಹಕ್ಕು ಚಲಾವಣೆಯಾಗಿದೆ.
ಎರಡೂ ಕ್ಷೇತ್ರಗಳಲ್ಲಿ ಶನಿವಾರ ಬೆಳಗ್ಗೆ 7ರಿಂದ ಮತದಾನ ಆರಂಭಗೊಂಡಿದೆ. ಪೂರ್ವಾಹ್ನ 11:30ರ ವೇಳೆ ಹಾನಗಲ್ ಕ್ಷೇತ್ರದಲ್ಲಿ ಶೇ.24.31ರಷ್ಟು ಮತದಾನವಾಗಿದ್ದರೆ, ಸಿಂದಗಿ ಕ್ಷೇತ್ರದಲ್ಲಿ ಶೇ.26.75ರಷ್ಟು ಹಕ್ಕು ಚಲಾವಣೆಯಾಗಿದೆ.
ಮತದಾನಕ್ಕಾಗಿ ಸಿಂದಗಿಯಲ್ಲಿ ಒಟ್ಟು 297 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 2,34,584 ಮತದಾರರಿದ್ದಾರೆ. ಹಾನಗಲ್ ನಲ್ಲಿ 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ಒಟ್ಟು 2,04,481 ಮತದಾರರಿದ್ದಾರೆ.
Next Story