ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ತಂದೆಯ ಅಂತಿಮ ದರ್ಶನ ಪಡೆದ ಪುನೀತ್ ಪುತ್ರಿ ಧೃತಿ

ಬೆಂಗಳೂರು: ವಿದೇಶದಿಂದ ವಿಮಾನ ಪ್ರಯಾಣದ ಮೂಲಕ ಬೆಂಗಳೂರಿಗೆ ಆಗಮಿಸಿದ ಪುನೀತ್ ಪುತ್ರಿ ಧೃತಿ ತಂದೆಯ ಅಂತಿಮ ದರ್ಶನ ಪಡೆದಿದ್ದಾರೆ.
ಶನಿವಾರ ಮಧ್ಯಾಹ್ನ ವೇಳೆಗೆ ಧೃತಿ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರನ್ನು ಪೊಲೀಸ್ ಭದ್ರತೆಯಲ್ಲಿ ಕಂಠೀರವ ಸ್ಟೇಡಿಯಂಗೆ ಕರೆತರಲಾಯಿತು.
ಪುನೀತ್ ರಾಜ್‍ಕುಮಾರ್ ಪಾರ್ಥೀವ ಶರೀರ ಕಂಡು ಕಣ್ಣೀರು ಹಾಕಿದರು. ಈ ವೇಳೆ ಪುನೀತ್ ಅವರ ಪತ್ನಿ ಅಶ್ವಿನಿ, ಕಿರಿಯಪುತ್ರಿ ವಂದಿತಾ ಕೂಡ ಕಣ್ಣೀರು ಸುರಿಸಿದರು.
ಈ ವೇಳೆ ಹಿರಿಯ ನಟ ಶಿವರಾಜ್ ಕುಮಾರ್ ತಮ್ಮನ ಮಗಳನ್ನು ಅಪ್ಪಿ ಸಂತೈಸಿದರು. ಅಮೆರಿಕದ ನ್ಯೂಯಾರ್ಕ್‍ನಿಂದ ಬೆಂಗಳೂರಿಗೆ ಧೃತಿ ಆಗಮಿಸುತ್ತಿದ್ದಂತೆ ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೊಲೀಸ್ ಎಸ್ಕಾರ್ಟ್‍ನಲ್ಲಿ ಕರೆತರಲಾಯಿತು.
ಆರಂಭದಲ್ಲಿ ಸದಾಶಿವ ನಗರಕ್ಕೆ ಆಗಮಿಸಿ ಅಲ್ಲಿಂದ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಅಪ್ಪನ ಪಾರ್ಥೀವ ಶರೀರದ ದರ್ಶನ ಪಡೆದರು
Next Story







