ಚಿಕ್ಕಮಗಳೂರು: ಪುನೀತ್ ರಾಜ್ ಕುಮಾರ್ ಸಾವಿನಿಂದ ಮನನೊಂದು ಅಭಿಮಾನಿ ಆತ್ಮಹತ್ಯೆ

ಚಿಕ್ಕಮಗಳೂರು: ನಟ ಪುನೀತ್ ಸಾವಿನಿಂದ ಮನನೊಂದು ಅಭಿಮಾನಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ರಾತ್ರಿ ಚಿಕ್ಕಮಗಳೂರು ನಗರದ ರಾಂಪುರದಲ್ಲಿ ನಡೆದಿದೆ.
ಶರತ್ (30) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂದ್ದಾನೆ ಎಂದು ತಿಳಿದು ಬಂದಿದೆ.
ನಟ ಪುನೀತ್ ಅವರ ಸಾವಿನ ಸುದ್ದಿಯಿಂದ ಆಘಾತಗೊಂಡಿದ್ದ ಶರತ್ ಗೆ ನಿನ್ನೆ ಮನೆಯವರು ಧೈರ್ಯ ತುಂಬಿದ್ದರು.
ಇಂದು ರಾತ್ರಿ ಟಿವಿಯಲ್ಲಿ ಸುದ್ದಿ ನೋಡುತ್ತಿದ್ದಂತೆ ಏಕಾಏಕಿ ರೂಮಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
Next Story





