ಶಿರ್ವದ ಯುವತಿ ನಾಪತ್ತೆ

ಉಡುಪಿ, ಅ.30: ಶಿರ್ವಗ್ರಾಮದ ಕೋಡುಗುಡ್ಡೆ ಹೌಸ್‌ನ ಪವಿತ್ರಾ(26) ಎಂಬುವವರು ಅ.26ರ ಬೆಳಗ್ಗೆ 8:30ರಿಂದ ಕೋಡುಗುಡ್ಡೆ ಹೌಸ್ ಮನೆಯಿಂದ ನಾಪತ್ತೆಯಾಗಿದ್ದಾರೆ.
ಚಹರೆ: 5 ಅಡಿ 2 ಇಂಚು ಎತ್ತರವಿದ್ದು, ಬಿಳಿ ಮೈ ಬಣ್ಣ, ಸಪೂರ ಶರೀರ, ಕೇಸರಿ ಬಣ್ಣದ ಚೂಡಿದಾರ, ಹಸಿರು ಬಣ್ಣದ ಪ್ಯಾಂಟ್ ಧರಿಸಿದ್ದು, ಮೂಗಿನ ಮೇಲೆ ಹಳೆ ಗಾಯದ ಗುರುತು ಇದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೋಲಿಸ್ ಉಪಾಧೀಕ್ಷಕರು, ಕಾರ್ಕಳ ವಿಭಾಗ, ಕಾರ್ಕಳ ದೂ.ಸಂಖ್ಯೆ: 08258-231333-9480805421, ಪೋಲಿಸ್ ವೃತ್ತ ನೀರೀಕ್ಷಕರು ಕಾಪು, ವೃತ್ತ ಕಚೇರಿ ದೂ.ಸಂಖ್ಯೆ: 0820- 2552133,94808054431 ಅಥವಾ ಶಿರ್ವ ಪೋಲಿಸ್ ಠಾಣೆ ದೂ.ಸಂಖ್ಯೆ: 0820-2554139, 9480805451ನ್ನು ಸಂಪರ್ಕಿಸಬಹುದು ಎಂದು ಶಿರ್ವಾ ಪೋಲಿಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





