ಟ್ವೆಂಟಿ- ವಿಶ್ವಕಪ್: ಶ್ರೀಲಂಕಾದ ವನಿಂದು ಹಸರಂಗ ಹ್ಯಾಟ್ರಿಕ್ ಸಾಧನೆ

photo: ICC
ಶಾರ್ಜಾ (ಯುಎಇ): ಶ್ರೀಲಂಕಾ ಬೌಲರ್ ವನಿಂದು ಹಸರಂಗ ಶನಿವಾರ ನಡೆದ ಟ್ವೆಂಟಿ-20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶನಿವಾರ ನಡೆದ ಟಿ-20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹಸರಂಗ ಈ ಸಾಧನೆ ಮಾಡಿದರು.
ಶ್ರೀಲಂಕಾದ ಸ್ಪಿನ್ನರ್ ಹಸರಂಗಾ ಅವರು ಐಡೆನ್ ಮಾರ್ಕ್ರಾಮ್, ಟೆಂಬಾ ಬವುಮಾ ಹಾಗೂ ಡ್ವೈನ್ ಪ್ರಿಟೋರಿಯಸ್ ಅವರನ್ನು ಔಟ್ ಮಾಡಿ ಹ್ಯಾಟ್ರಿಕ್ ಪೂರೈಸಿದರು,
ಐರ್ಲೆಂಡ್ ನ ಕರ್ಟಿಸ್ ಕ್ಯಾಂಫರ್ ಹಾಗೂ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಟ್ವೆಂಟಿ-20 ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಪಡೆದ ಇತರ ಇಬ್ಬರು ಬೌಲರ್ಗಳಾಗಿದ್ದಾರೆ.
ಮಿಲ್ಲರ್ ಅವರ ಕೊನೆಯ ಓವರ್ ನಲ್ಲಿನ ಸಾಹಸದಿಂದಾಗಿ ಹ್ಯಾಟ್ರಿಕ್ ಹೀರೋ ವನಿಂದು ಹಸರಂಗ ಅವರ ಪ್ರಯತ್ನ ವಿಫಲವಾಯಿತು. ದಕ್ಷಿಣ ಆಫ್ರಿಕಾ ಶನಿವಾರ ಶ್ರೀಲಂಕಾವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿತು.
Next Story





