ಮನು ಬಳಿಗಾರ್ ಪು.ತಿ.ನ ಪ್ರಶಸ್ತಿಗೆ ಆಯ್ಕೆ
ಬೆಂಗಳೂರು, ಅ.30: ಎಸ್.ಕೆ.ಎಫ್. ಕಾರ್ಮಿಕ ಸಂಘದ ವತಿಯಿಂದ ನೀಡುವ ಪ್ರತಿಷ್ಠಿತ ಪು.ತಿ.ನ ಪ್ರಶಸ್ತಿ-2021ಕ್ಕೆ ನಾಡೋಜ ಡಾ. ಮನು ಬಳಿಗಾರ್ ಆಯ್ಕೆಯಾಗಿದ್ದಾರೆ. ಎಸ್.ಕೆ.ಎಫ್. ಕಾರ್ಖಾನೆಯ ರಾಜ್ಯೋತ್ಸವ ಸಮಿತಿಯು ಕನ್ನಡನಾಡು ನುಡಿಗೆ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ, ಪುರಸ್ಕøತರನ್ನು ಆಯ್ಕೆ ಮಾಡಲಾಗಿದೆ.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.1ರ ಬೆಳಗ್ಗೆ 7 ಗಂಟೆಗೆ ಕಾರ್ಖಾನೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಡೋಜ ಡಾ. ಮನು ಬಳಿಗಾರ್‍ಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಪ್ರಶಸ್ತಿಯನ್ನು ಬಿ.ವಿ. ವೈಕುಂಠರಾಜು, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಗಿರೀಶ್ ಕಾಸರವಳ್ಳಿ, ಎಚ್.ಎಸ್. ವೆಂಕಟೇಶಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಷ. ಶೆಟ್ಟರ್ ಮುಂತಾದಾರಿಗೆ ನೀಡಿ ಗೌರವಿಸಲಾಗಿದೆ.
Next Story





