ಕೋಟ: ಕೈ ಜಜ್ಜಿ ಗಾಯಗೊಳಿಸಿಕೊಂಡ ಪುನೀತ್ ಅಭಿಮಾನಿ!

ಕೋಟ: ನಟ ಪುನೀತ್ ರಾಜ್ ಕುಮಾರ್ ನಿಧನದಿಂದ ಮನನೊಂದ ಅಭಿಮಾನಿ ಆಟೋ ಚಾಲಕರೊಬ್ಬರು ಕೈ ಜಜ್ಜಿ ಗಾಯಗೊಳಿಸಿರುವ ಘಟನೆ ಸಾಲಿಗ್ರಾಮದಲ್ಲಿ ಅ.29ರಂದು ರಾತ್ರಿ ವೇಳೆ ನಡೆದಿದೆ ಎಂದು ತಿಳಿದು ಬಂದಿದೆ.
ಸಾಲಿಗ್ರಾಮದ ಕೆಮ್ಮಣ್‌ಕೆರೆ ನಿವಾಸಿ ಸತೀಶ್ ಗಾಯಗೊಂಡ ಅಭಿಮಾನಿ. ಇವರು ಪುನಿತ್ ಸಾವಿಗೆ ನೊಂದು ತನ್ನ ರಿಕ್ಷಾದ ಗಾಜಿನಿಂದ ಮೈಮೇಲೆ ಇರಿದುಕೊಂಡು ಗಾಯಗೊಳಿಸಿಕೊಂಡಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದ ಸ್ನೇಹಿತರು ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರು ಸಾಲಿಗ್ರಾಮ ಮೀನು ಮಾರುಕಟ್ಟೆ ಸಮೀಪ ಆಟೋ ಚಾಲಕರಾಗಿ ದುಡಿಯುತ್ತಿದ್ದಾರೆ.
Next Story





