Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ನೂತನ ಶಿಕ್ಷಣ ನೀತಿಯು ವೈವಿಧ್ಯಮಯ...

ನೂತನ ಶಿಕ್ಷಣ ನೀತಿಯು ವೈವಿಧ್ಯಮಯ ಪರಂಪರೆಗೆ ಧಕ್ಕೆ ಉಂಟುಮಾಡುತ್ತದೆ: ಪ್ರಕಾಶ್‍ಭಾಯಿ ಶಾ

ವಾರ್ತಾಭಾರತಿವಾರ್ತಾಭಾರತಿ30 Oct 2021 10:46 PM IST
share

ಬೆಂಗಳೂರು, ಅ.30: ಭಾರತ ದೇಶವು ಸ್ವಾತಂತ್ರ್ಯಾಂದೋಲನ ಮತ್ತು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಚಿಂತನೆಗಳ ವೈವಿಧ್ಯತೆ ಮಧ್ಯೆದಲ್ಲೂ ಒಂದು ಭವ್ಯ ಶಿಕ್ಷಣ ಪರಂಪರೆಯನ್ನು ಹೊಂದಿದೆ. ನೂತನ ಶಿಕ್ಷಣ ನೀತಿಯು ವೈವಿಧ್ಯಮಯ ಪರಂಪರೆಗೆ ಧಕ್ಕೆ ಉಂಟುಮಾಡುತ್ತದೆ. ಈ ನೀತಿಯು ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡುವುತ್ತದೆ. ಭಾರತವನ್ನು ಫ್ಯಾಸಿವಾದಕ್ಕೆ ತಳ್ಳುತ್ತದೆ ಎಂದು ಎ.ಐ.ಎಸ್.ಇ.ಸಿಯ ಅಖಿಲ ಭಾರತ ಅಧ್ಯಕ್ಷ ಪ್ರಕಾಶ್‍ಭಾಯಿ ಶಾ ತಿಳಿಸಿದ್ದಾರೆ.

ಶನಿವಾರ ಎ.ಐ.ಎಸ್.ಇ.ಸಿ ಆಯೋಜಿಸಿದ್ದ ‘ಅಖಿಲ ಭಾರತ ಶಿಕ್ಷಣ ಉಳಿಸಿ ಸಮ್ಮೇಳನ’ದ ವೆಬಿನಾರ್‍ನಲ್ಲಿ ಮಾತನಾಡಿದ ಅವರು, ಹೊಸ ಶಿಕ್ಷಣ ನೀತಿಯು ಧರ್ಮನಿರಪೇಕ್ಷತೆ, ವೈಜ್ಞಾನಿಕ ದೃಷ್ಟಿಕೋನ ಮತ್ತು ಪ್ರಜಾಸತ್ತಾತ್ಮಕ ವಿಚಾರಗಳ ಮೇಲೆ ಪ್ರಹಾರ ಮಾಡುತ್ತದೆ. ಸರಕಾರ ರಾಷ್ಟ್ರವಾದದ ಹೆಸರಿನಲ್ಲಿನ ನೀತಿಯನ್ನು ಬಲವಂತವಾಗಿ ಹೇರುತ್ತಿದೆ. ಆದುದರಿಂದ ದೇಶದ ಜನತೆ ನೂತನ ನೀತಿಯನ್ನು ವಿರೋಧಿಸುವುದು ಅನಿವಾರ್ಯವಾಗಿದೆ. ಈ ಮೂಲಕ ಕೇಂದ್ರವು ವಿರೋಧಿ ಅಭಿಪ್ರಾಯಗಳನ್ನು ಸ್ವೀಕರಿಸುವ ಪ್ರಜಾತಂತ್ರದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಬೇಕು ಎಂದರು.

ಖ್ಯಾತ ಇತಿಹಾಸ ತಜ್ಞ ರೋಮಿಲ್ಲಾ ಥಾಪರ್ ಮಾತನಾಡಿ, ಶಿಕ್ಷಣದ ಅತ್ಯಮೂಲ್ಯ ಭಾಗವಾದ ಪಠ್ಯಕ್ರಮವೂ ಹಿಂದಿನಿಂದಲೂ ಬಹಳ ನಿರ್ಲಕ್ಷಕ್ಕೊಳಗಾಗಿದೆ. ಇದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯು ಹೊರತಾಗಿಲ್ಲ. ಇತ್ತೀಚೆಗೆ ಬಂದ ಆನ್‍ಲೈನ್ ಶಿಕ್ಷಣವೂ ವಿದ್ಯಾರ್ಥಿಗಳಿಗೆ ಸಂಪೂರ್ಣ ಜ್ಞಾನ ಒದಗಿಸುವುದಿಲ್ಲ. ಹಾಗೆಯೇ ಇತಿಹಾಸದ ವಿಷಯಕ್ಕೆ ಬಂದರೆ, ಇತಿಹಾಸದ ವ್ಯಾಖ್ಯಾನ ಎನ್ನುವುದು ಇತಿಹಾಸದಲ್ಲಿ ಸಿಕ್ಕ ಐತಿಹಾಸಿಕ ಸಂಗತಿಗಳ ಆಧಾರದ ಮೇಲೆ ನಿಂತಿರುತ್ತದೆ. ಇದು ಯಾರೊಬ್ಬರ ಅಭಿಪ್ರಾಯದ ಮೇಲೆ ನಿಂತಿಲ್ಲ. ಇತಿಹಾಸವೆಂದರೆ ಅದು ಕೇವಲ ಮೇಲ್ವರ್ಗದ ಇತಿಹಾಸವಲ್ಲ, ಅದು ಕೆಳ ವರ್ಗದ ಮತ್ತು ತುಳಿತಕ್ಕೊಳಗಾದ ಸಮುದಾಯದ ಕಥೆಯನ್ನೂ ಒಳಗೊಂಡಿರುತ್ತದೆ. ಈ ನೂತನ ಶಿಕ್ಷಣ ನೀತಿ ಇದನ್ನೆಲ್ಲಾ ಪರಿಗಣಿಸದೇ ಇತಿಹಾಸವನ್ನೇ ತಿರುಚುವ ಕೆಲಸ ಮಾಡುತ್ತದೆ ಎಂದರು. 

ಇರ್ಫಾನ್ ಹಬೀಬ ಮಾತನಾಡಿ, ಸರಕಾರ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದೆ. ಹೊಸ ಶಿಕ್ಷಣ ನೀತಿಯು ದೇಶಭಕ್ತಿಯ ಹೆಸರಲ್ಲಿ ಇತಿಹಾಸದ ಬೆಳವಣಿಗೆಯ ಸಂಕುಚಿತತೆಯನ್ನು ಹರಡುತ್ತಿದೆ. ನೂತನ ಶಿಕ್ಷಣ ನೀತಿ ದಲಿತ, ಗ್ರಾಮೀಣ ಮತ್ತು ಹಿಂದುಳಿದ ಸಮುದಾಯದ ಜನಗಳ ವಿರೋಧಿಯಾಗಿದೆ. ಇದು ಶಿಕ್ಷಣದ ವ್ಯಾಪಾರೀಕರಣ ಮತ್ತು ಖಾಸಗೀಕರಣವನ್ನು ಇನ್ನಷ್ಟು ಉತ್ತೇಜಿಸುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಪ್ರೇಮಿ ಜನತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನೋಡಬೇಕಿದೆ ಎಂದರು. 

ಬಳಿಕ ಮಾತನಾಡಿದ ಪ್ರೊ. ಕರುಣಾನಾಥನ್, ಈ ಹಿಂದಿನ ನೀತಿಗಳು ದೇಶದಲ್ಲಿ ಜಾರಿಗೊಂಡಿದ್ದವು. ಆದರೆ ಈ ನೀತಿಯು ದೇಶದ ಶಿಕ್ಷಣ ಕ್ಷೇತ್ರದ ಮೇಲೆ ಬಲವಂತವಾಗಿ ಹೇರಿಕೆಯಾಗಿದೆ. ಇದು ಜಾತಿ ಧರ್ಮ ಭಾಷೆ ಪ್ರಾದೇಶಿಕತೆಗಳಲ್ಲಿ ಸಮಾನತೆ ಸಾದಿಸುವ ಬದಲು ಅಸಮಾನತೆಯನ್ನು ಇನ್ನಷ್ಟು ಹೆಚ್ಚುಮಾಡುತ್ತದೆ. ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನೇ ಸರ್ವನಾಶ ಮಾಡಲಿದೆ. ಇಂಥ ಹೀನ ಉದ್ದೇಶವಿರುವಾಗ ರಾಜ್ಯ ವಿಶ್ವವಿದ್ಯಾಲಯಗಳ ಅವಶ್ಯಕತೆಯಾದರೂ ಯಾಕೆ? ಎಂದು ಪ್ರಶ್ನಿಸಿದರು. 

ವೆಬಿನಾರ್‍ನಲ್ಲಿ ಅಖಿಲಭಾರತ ಶಿಕ್ಷಣ ಉಳಿಸಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ. ಆನಿಸ್ ರಾಯ್, ಪ್ರೊ. ಟಿ.ಕೆ ನಸ್ಕರ್, ನಿವೃತ್ತ ಕುಲಪತಿಗಳಾದ ಜವಾಹರ್ ನೇಸನ್, ತಫೋಧೀರ ಬಟ್ಟಾಚಾರ್ಯ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X