ಅನುದಾನದಲ್ಲಿ ಇಳಿಕೆ: ಶೇ.13.25 ಕುಟುಂಬಗಳು ಎಂನರೇಗಾ ಉದ್ಯೋಗ ವಂಚಿತ

ಹೊಸದಿಲ್ಲಿ,ಅ.30: 2021-22ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರವು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂನರೇಗಾ)ಗೆ 73 ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, 2020-21ರ 1.11 ಲಕ್ಷ ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತಕ್ಕಿಂತ ಶೇ.34ರಷ್ಟು ಇಳಿಕೆಯಾಗಿದೆ.
ಈ ವರ್ಷದ ಹಣಕಾಸು ವರ್ಷದಲ್ಲಿ ಎಂನರೇಗಾ ಯೋಜನೆಯಡಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಶೇ.13 .25ರಷ್ಟು ಕುಟುಂಬಗಳಿಗೆ ಯಾವುದೇ ಕೆಲಸ ನೀಡಲಾಗಿಲ್ಲವೆಂದು ಸಾಮಾಜಿಕ ಕಾರ್ಯಕರ್ತರು ಹೇಳಿದ್ದಾರೆ. ಎಂನರೇಗಾ ಯೋಜನೆಯ ಬಜೆಟ್ ಅನುದಾನದಲ್ಲಿ ಸರಕಾರವು ಇಳಿಕೆಯನ್ನು ಮಾಡಿರುವುದೇ ಇದಕ್ಕೆ ಕಾರಣವೆಂದು ಅವರು ಆರೋಪಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಎಂನರೇಗಾ ಯೋಜನೆಯಡಿ ಉದ್ಯೋಗಕ್ಕಾಗಿ 6.77 ಕೋಟಿ ಮಂದಿ ಬೇಡಿಕೆ ಸಲ್ಲಿಸಿದ್ದು, ಅವರಲ್ಲಿ 6.77 ಕೋಟಿ ಮಂದಿಗೆ ಮಾತ್ರ ಉದ್ಯೋಗ ಲಭಿಸಿದೆ. ಇದರಿಂದಾಗಿ ಶೇ.89.7 ಅಥವಾ ಶೇ.13.25 ಶೇ. ಮಂದಿ ಈ ಯೋಜನೆಯಲ್ಲಿ ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದರು.
2021-22ರ ಹಣಕಾಸು ವರ್ಷದಲ್ಲಿ ಎಂನರೇಗಾ ಯೋಜನೆಯಡಿ ಕೇಂದ್ರ ಸರಾಕಾರ 73 ಸಾವಿರ ಕೋಟಿ ರೂ. ಅನುದಾನವನ್ನು ನೀಡಿತ್ತು. ಆದರೆ 2020-21ರ ಬಜೆಟ್‌ನಲ್ಲಿ ನಿಗದಿತ ಮನ್ರೇಗಾ ಅನುದಾನವು 1.11 ಲಕ್ಷ ಕೋಟಿಯಲ್ಲಿ 34 ಶೇಕಡ ಇಳಿಕೆಯಾಗಿದೆ ಎಂದರು.







