ಜೀಪ್ ಢಿಕ್ಕಿ: ಪಾದಚಾರಿ ಮೃತ್ಯು
ಮಂಗಳೂರು, ಅ.30: ಪಣಂಬೂರು ಜಂಕ್ಷನ್ ಬಳಿ ಜೀಪ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.ಮೃತರನ್ನು ನೆಲ್ಯಾಡಿಯ ಗೋಳಿತೊಟ್ಟು ಶಾಂತಿನಗರ ನಿವಾಸಿ ರವೀಂದ್ರ (40) ಎಂದು ಗುರುತಿಸಲಾಗಿದೆ.
ಅ.29ರಂದು ಸಂಜೆ 7:45ರ ವೇಳೆಗೆ ಪಣಂಬೂರು ಜಂಕ್ಷೃನ್ ಬಳಿ ಇರುವ ಬಸ್ ನಿಲ್ದಾಣದ ಸಮೀಪ ರವೀಂದ್ರ ರಸ್ತೆ ದಾಟುತ್ತಿದ್ದಾಗ ಪಣಂಬೂರಿನಿಂದ ಬೈಕಂಪಾಡಿಗೆ ತೆರಳುತ್ತಿದ್ದ ಜೀಪ್ ಡಿಕ್ಕಿಯಾಗಿದೆ. ಇದರಿಂದ ರವೀಂದ್ರ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.ಈ ಬಗ್ಗೆ ನಗರ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





