ದಿಲ್ಲಿ ಸಮೀಪವಿರುವ 14 ಜಿಲ್ಲೆಗಳಲ್ಲಿ ಪಟಾಕಿಗಳನ್ನು ನಿಷೇಧಿಸಿದ ಹರ್ಯಾಣ

ಚಂಡೀಗಢ: ದೊಡ್ಡ ಹಬ್ಬ ದೀಪಾವಳಿಗೆ ಕೆಲವು ದಿನಗಳ ಮೊದಲು ದಿಲ್ಲಿ ಸಮೀಪದ 14 ಜಿಲ್ಲೆಗಳಲ್ಲಿ ಪಟಾಕಿ ಮಾರಾಟ ಹಾಗೂ ಬಳಕೆಯನ್ನು ಹರ್ಯಾಣ ನಿಷೇಧಿಸಿದೆ ಎಂದು ರಾಜ್ಯ ಸರಕಾರ ಇಂದು ಅಧಿಸೂಚನೆಯಲ್ಲಿ ತಿಳಿಸಿದೆ. ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಸಹ ಅಂತಹ ರೀತಿಯ ಯಾವುದೇ ಮಾರಾಟವನ್ನು ಮಾಡಲು ಸಾಧ್ಯವಿಲ್ಲ.
14 ಜಿಲ್ಲೆಗಳಾದ ಭಿವಾನಿ, ಚಾರ್ಖಿ ದಾದ್ರಿ, ಫರಿದಾಬಾದ್, ಗುರುಗ್ರಾಮ್, ಝಜ್ಜರ್, ಜಿಂದ್, ಕರ್ನಾಲ್, ಮಹೇಂದ್ರಗಢ, ನುಹ್, ಪಲ್ವಾಲ್, ಪಾಣಿಪತ್, ರೇವಾರಿ, ರೋಹ್ಟಕ್ ಹಾಗೂ ಸೋನಿಪತ್ ಗಳಲ್ಲಿ ಪಟಾಕಿ ನಿಷೇಧ ಹೇರಲಾಗಿದೆ.
ಕಳೆದ ತಿಂಗಳು ನೆರೆಯ ದಿಲ್ಲಿ ಸರಕಾರವು ಅಪಾಯಕಾರಿ ವಾಯು ಮಾಲಿನ್ಯ ಮಟ್ಟಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳ ಸಂಗ್ರಹಣೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿತು.
Next Story