ಕೋವಿಡ್ ಹೆಚ್ಚಳ:ನಿಯಂತ್ರಣ ಕ್ರಮ ಹೆಚ್ಚಿಸುವಂತೆ ಅಸ್ಸಾಂ,ಪಶ್ಚಿಮಬಂಗಾಳಕ್ಕೆ ಕೇಂದ್ರ ಸೂಚನೆ

ಹೊಸದಿಲ್ಲಿ: ಅಕ್ಟೋಬರ್ 20 ಹಾಗೂ ಅ. 26 ರ ನಡುವೆ ಎರಡು ರಾಜ್ಯಗಳಲ್ಲಿ ರೋಗದ ಪ್ರಕರಣಗಳಲ್ಲಿ ವಾರಕ್ಕೆ 41 ಶೇ. ರಷ್ಟು ಏರಿಕೆಯಾಗಿರುವುದರಿಂದ ಕೋವಿಡ್-ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೇಂದ್ರ ಸರಕಾರವು ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಸರಕಾರಗಳನ್ನು ಶನಿವಾರ ಸೂಚಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರ್ತಿ ಅಹುಜಾ ಅವರು ಅಕ್ಟೋಬರ್ 25 ರವರೆಗೆ ಕಳೆದ ನಾಲ್ಕು ವಾರಗಳಲ್ಲಿ ಪಾಸಿಟಿವ್ ಪ್ರಕರಣಗಳ ಏರಿಕೆಯ ಆರಂಭಿಕ ಚಿಹ್ನೆಗಳನ್ನು ಬೆಟ್ಟು ಮಾಡಿದ್ದಾರೆ.
Next Story