Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ...

2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

10 ಸಂಘ ಸಂಸ್ಥೆಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ

ವಾರ್ತಾಭಾರತಿವಾರ್ತಾಭಾರತಿ31 Oct 2021 4:51 PM IST
share
2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಬೆಂಗಳೂರು, ಅ.31: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಪ್ರಶಸ್ತಿ ಆಯ್ಕೆ ಸಮಿತಿಯು 2020-21ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 66 ಸಾಧಕರು ಹಾಗೂ ಈ ವರ್ಷ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣೆಗಾಗಿ ರಾಜ್ಯದ 10 ಸಂಘ ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ(ಈ ವರ್ಷಕ್ಕೆ ಮಾತ್ರ ಸೀಮಿತ)ಯನ್ನು ನೀಡಲು ಆಯ್ಕೆ ಮಾಡಿದೆ.

ರಾಜ್ಯೋತ್ಸವ ಪ್ರಶಸ್ತಿಯು ಒಂದು ಲಕ್ಷ ರೂ.ನಗದು, 25 ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಫಲಕ, ಮೈಸೂರು ಪೇಟಾ, ಹಾರವನ್ನು ಒಳಗೊಂಡಿರುತ್ತದೆ.

ಸಾಧಕರ ಪಟ್ಟಿ ಇಂತಿವೆ

► ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ: ಗದಗ ಜಿಲ್ಲೆಯ ಶ್ರೀ ವಿರೇಶ್ವರ ಪುಣ್ಯಾಶ್ರಮ ಅಂಧ ಮಕ್ಕಳ ಶಾಲೆ, ದಾವಣಗೆರೆ ಜಿಲ್ಲೆಯ ಕರ್ನಾಟಕ ಹಿಮೋ ಫೀಲಿಯಾ ಸೊಸೈಟಿ, ಕಲಬುರಗಿ ಜಿಲ್ಲೆಯ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ರಾಮಕೃಷ್ಣಾಶ್ರಮ, ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ್ ಯೂತ್ ಫೆಡರೇಷನ್, ವಿಜಯಪುರ ಜಿಲ್ಲೆಯ ಅನುಗ್ರಹ ಕಣ್ಣಿನ ಆಸ್ಪತ್ರೆ, ಹಾವೇರಿ ಜಿಲ್ಲೆಯ ಉತ್ಸವ ರಾಕ್ ಗಾರ್ಡನ್, ಬೆಂಗಳೂರಿನ ಅದಮ್ಯ ಚೇತನ, ಸ್ಟೆಪ್ ಒನ್ ಹಾಗೂ ಬನಶಂಕರಿ ಮಹಿಳಾ ಸಮಾಜ ಸಂಘ ಸಂಸ್ಥೆಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ ಪ್ರಕಟಿಸಲಾಗಿದೆ.

► ರಾಜ್ಯೋತ್ಸವ ಪ್ರಶಸ್ತಿ: ಸಾಹಿತ್ಯ: ಮಹಾದೇವ ಶಂಕನಪುರ(ಚಾಮರಾಜನಗರ), ಪ್ರೊ.ಡಿ.ಟಿ.ರಂಗಸ್ವಾಮಿ(ಚಿತ್ರದುರ್ಗ), ಜಯಲಕ್ಷ್ಮಿ ಮಂಗಳಮೂರ್ತಿ(ರಾಯಚೂರು), ಅಜ್ಜಂಪುರ ಮಂಜುನಾಥ್(ಚಿಕ್ಕಮಗಳೂರು), ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ(ವಿಜಯಪುರ) ಹಾಗೂ ಸಿದ್ದಪ್ಪ ಬಿದರಿ(ಬಾಗಲಕೋಟೆ).

►ರಂಗಭೂಮಿ: ಫಕೀರಪ್ಪ ರಾಮಪ್ಪ ಕೊಡಾಯಿ(ಹಾವೇರಿ), ಪ್ರಕಾಶ್ ಬೆಳವಾಡಿ(ಚಿಕ್ಕಮಗಳೂರು), ರಮೇಶ್ ಗೌಡ ಪಾಟೀಲ್(ಬಳ್ಳಾರಿ), ಮಲ್ಲೇಶಯ್ಯ ಎನ್.(ರಾಮನಗರ), ಸಾವಿತ್ರಿ ಗೌಡರ್(ಗದಗ).

► ಜಾನಪದ: ಆರ್.ಬಿ.ನಾಯಕ(ವಿಜಯಪುರ), ಗೌರಮ್ಮ ಹುಚ್ಚಪ್ಪ ಮಾಸ್ತರ್(ಶಿವಮೊಗ್ಗ), ದುರ್ಗಪ್ಪ ಚೆನ್ನದಾಸರ(ಬಳ್ಳಾರಿ), ಬನ್ನಂಜೆ ಬಾಬು ಅಮೀನ್(ಉಡುಪಿ), ಮಲ್ಲಿಕಾರ್ಜುನ ರಾಚಪ್ಪ ಮುದಕವಿ(ಬಾಗಲಕೋಟೆ), ವೆಂಕಪ್ಪ ಗೋವಿಂದಪ್ಪ ಭಜಂತ್ರಿ(ಧಾರವಾಡ), ಮಹಾರುದ್ರಪ್ಪ ವೀರಪ್ಪ ಇಟಗಿ(ಹಾವೇರಿ).

►ಸಂಗೀತ: ಕೋಲಾರ ಜಿಲ್ಲೆಯ ತ್ಯಾಗರಾಜು ಸಿ(ನಾದಸ್ವರ) ಹಾಗೂ ಹೆರಾಲ್ಡ್ ಸಿರಿಬ್ ಡಿಸೋಜಾ(ದಕ್ಷಿಣ ಕನ್ನಡ). ಶಿಲ್ಪಕಲೆ: ಡಾ.ಜಿ.ಜ್ಞಾನಾನಂದ(ಚಿಕ್ಕಬಳ್ಳಾಪುರ) ಹಾಗೂ ವೆಂಕಣ್ಣ ಚಿತ್ರಗಾರ(ಕೊಪ್ಪಳ). ಸಮಾಜ ಸೇವೆ: ಬಾಗಲಕೋಟೆ ಜಿಲ್ಲೆಯ ಸೂಲಗಿತ್ತಿ ಯಮುನವ್ವ(ಸಾಲಮಂಟಪಿ), ಮದಲಿ ಮಾದಯ್ಯ(ಮೈಸೂರು), ಮುನಿಯಪ್ಪ ದೊಮ್ಮಲೂರು(ಬೆಂಗಳೂರು ನಗರ), ಬಿ.ಎಲ್.ಪಾಟೀಲ್(ಬೆಳಗಾವಿ ಜಿಲ್ಲೆಯ ಅಥಣಿ) ಹಾಗೂ ಡಾ.ಜೆ.ಎನ್.ರಾಮಕೃಷ್ಣೇಗೌಡ(ಮಂಡ್ಯ).

►ವೈದ್ಯಕೀಯ: ಡಾ.ಸುಲ್ತಾನ್ ಬಿ ಜಗಳೂರು(ದಾವಣಗೆರೆ), ಡಾ.ವ್ಯಾಸ ದೇಶಪಾಂಡೆ(ವೇದವ್ಯಾಸ)-ಧಾರವಾಡ, ಡಾ.ಎ.ಆರ್.ಪ್ರದೀಪ್(ದಂತ ವೈದ್ಯಕೀಯ)-ಬೆಂಗಳೂರು ನಗರ, ಡಾ.ಸುರೇಶ್ ರಾವ್(ದಕ್ಷಿಣ ಕನ್ನಡ), ಡಾ.ಸುದರ್ಶನ್(ಬೆಂಗಳೂರು), ಡಾ.ಶಿವನಗೌಡ ರುದ್ರಗೌಡ ರಾಮನಗೌಡರ್(ಧಾರವಾಡ).

►ಕ್ರೀಡೆ: ರೋಹನ್ ಬೊಪ್ಪಣ್ಣ(ಕೊಡಗು), ಕೆ.ಗೋಪಿನಾಥ್(ವಿಶೇಷ ಚೇತನ)-ಬೆಂಗಳೂರು ನಗರ, ರೋಹಿತ್ ಕುಮಾರ್ ಕಟೀಲ್(ಉಡುಪಿ), ಎ.ನಾಗರಾಜ್(ಕಬ್ಬಡ್ಡಿ)-ಬೆಂಗಳೂರು ನಗರ.

►ಸಿನಿಮಾ: ದೇವರಾಜ್(ಬೆಂಗಳೂರು ನಗರ).

►ಶಿಕ್ಷಣ: ಸ್ವಾಮಿ ಲಿಂಗಪ್ಪ(ಮೈಸೂರು), ಶ್ರೀಧರ್ ಚಕ್ರವರ್ತಿ(ಧಾರವಾಡ), ಪ್ರೊ.ಪಿ.ವಿ.ಕೃಷ್ಣ ಭಟ್(ಶಿವಮೊಗ್ಗ).

►ಸಂಕೀರ್ಣ: ಡಾ.ಬಿ.ಅಂಬಣ್ಣ(ವಿಜಯನಗರ), ಕ್ಯಾಪ್ಟನ್ ರಾಜಾರಾವ್(ಬಳ್ಳಾರಿ), ಗಂಗಾವತಿ ಪ್ರಾಣೇಶ್(ಕೊಪ್ಪಳ).

►ವಿಜ್ಞಾನ/ತಂತ್ರಜ್ಞಾನ: ಡಾ.ಎಚ್.ಎಸ್.ಸಾವಿತ್ರಿ(ಬೆಂಗಳೂರು ನಗರ) ಹಾಗೂ ಪ್ರೊ.ಜಿ.ಯು.ಕುಲ್ಕರ್ಣಿ(ಬೆಂಗಳೂರು).

►ಕೃಷಿ: ಡಾ.ಸಿ.ನಾಗರಾಜ್(ಬೆಂಗಳೂರು ಗ್ರಾಮಾಂತರ), ಗುರುಲಿಂಗಪ್ಪ ಮೇಲ್ದೊಡ್ಡಿ(ಬೀದರ್), ಶಂಕರಪ್ಪ ಅಮ್ಮನಘಟ್ಟ(ತುಮಕೂರು).

►ಪರಿಸರ: ಮಹಾದೇವ ವೇಳಿಪಾ(ಉತ್ತರ ಕನ್ನಡ), ಬೈಕಂಪಾಡಿ ರಾಮಚಂದ್ರ(ದಕ್ಷಿಣ ಕನ್ನಡ).

►ಪತ್ರಿಕೋದ್ಯಮ: ಪಟ್ನಂ ಅನಂತ ಪದ್ಮನಾಭ(ಮೈಸೂರು), ಯು.ಬಿ.ರಾಜಲಕ್ಷ್ಮಿ(ಉಡುಪಿ).

►ನ್ಯಾಯಾಂಗ: ಸಿ.ವಿ.ಕೇಶವಮೂರ್ತಿ(ಮೈಸೂರು).

►ಆಡಳಿತ: ಎಚ್.ಆರ್.ಕಸ್ತೂರಿ ರಂಗನ್(ಹಾಸನ).

►ಸೈನಿಕ: ನವೀನ್ ನಾಗಪ್ಪ(ಹಾವೇರಿ).

►ಯಕ್ಷಗಾನ: ಗೋಪಾಲ ಆಚಾರ್ಯ(ಶಿವಮೊಗ್ಗ).

►ಹೊರನಾಡು ಕನ್ನಡಿಗ: ಡಾ.ಸುನಿತಾ ಶೆಟ್ಟಿ(ಮುಂಬೈ), ಚಂದ್ರಶೇಖರ್ ಪಾಲ್ತಾಡಿ(ಮುಂಬೈ), ಡಾ.ಸಿದ್ದರಾಮೇಶ್ವರ ಕಂಟೀಕರ್, ಪ್ರವೀಣ್ ಶೆಟ್ಟಿ(ದುಬೈ).

►ಪೌರ ಕಾರ್ಮಿಕ: ರತ್ನಮ್ಮ ಶಿವಪ್ಪ ಬಬಲಾದ(ಯಾದಗಿರಿ).

►ಹೈದರಾಬಾದ್-ಕರ್ನಾಟಕ ಏಕೀಕರಣ ಹೋರಾಟಗಾರರು: ಮಹದೇವಪ್ಪ ಕಡೆಚೂರು(ಕಲಬುರಗಿ).

►ಯೋಗ: ಭ.ಮ.ಶ್ರೀಕಂಠ(ಶಿವಮೊಗ್ಗ) ಹಾಗೂ ಡಾ.ರಾಘವೇಂದ್ರ ಶೆಣೈ(ಬೆಂಗಳೂರು).

►ಉದ್ಯಮ: ಶ್ಯಾಮರಾಜು(ಬೆಂಗಳೂರು).

ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ 66 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಸೇವಾ ಸಿಂಧು ಮೂಲಕ ಸಾರ್ವಜನಿಕರು ಮಾಡಿದ ಶಿಫಾರ್ಸುಗಳನ್ನು ಪರಿಶೀಲಿಸಿ ಹಾಗೂ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿದ ಅನೇಕ ಮಹನೀಯರನ್ನು ಹೆಕ್ಕೆ ತೆಗೆದು ಅವರ ಹೆಸರುಗಳನ್ನು ಕೂಡ ಪ್ರಶಸ್ತಿ ಸಲಹಾ ಸಮಿತಿ ಮತ್ತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಪ್ರಶಸ್ತಿ ಆಯ್ಕೆ ಸಮಿತಿಗಳ ಮುಂದೆ ಇಡಲಾಯಿತು. ಅವುಗಳ ಸಮಗ್ರ ಪರಿಶೀಲನೆಯ ನಂತರ ಆಯ್ಕೆ ಸಮಿತಿಯು ಹೆಸರುಗಳನ್ನು ಅಂತಿಮಗೊಳಿಸಿದೆ.

ವಿ.ಸುನೀಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪರಿಚಯ

ಮಂಜುನಾಥ ಅಜ್ಜಂಪುರ:ಮಂಜುನಾಥ ಅಜ್ಜಂಪುರ ಅವರು ವಿವಿಧ ದಿನ ಪತ್ರಿಕೆ, ವಾರಪತ್ರಿಕೆ, ನಿಯತಕಾಲಿಕೆಗಳಲ್ಲಿ 900ಕ್ಕೂ ಹೆಚ್ಚು ಅಂಕಣ, ಲೇಖನ, ಕಥೆ ಮತ್ತು ಪ್ರಬಂಧಗಳನ್ನು ಬರೆದವರು. ವಾಯ್ಸ್ ಆಫ್ ಇಂಡಿಯಾ ಸಾಹಿತ್ಯ ಸರಣಿಯಲ್ಲಿ ಒಂಭತ್ತಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದು, ವಾಯ್ಸ್ ಆಫ್ ಇಂಡಿಯಾ ಸಾಹಿತ್ಯ ಸರಣಿಮತ್ತು ಅರುಣ್ ಶೌರಿ ಸಾಹಿತ್ಯ ಸರಣಿಯ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಪ್ರೊ.ರಂಗಸ್ವಾಮಿ: ಪ್ರೊ.ಡಿ.ಟಿ.ರಂಗಸ್ವಾಮಿ 50ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ವಿಮರ್ಶೆ, ಜೀವನಚರಿತ್ರೆ, ನಾಟಕ, ಶಾಸ್ತ್ರ ಗ್ರಂಥ, ಮಕ್ಕಳ ಸಾಹಿತ್ಯ ಪತ್ರ ಲೇಖನ ಕಲೆ, ಇತ್ಯಾದಿ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಅಧ್ಯಾಪಕರಾದ ಇವರು ಕನ್ನಡ ಪಠ್ಯಪಸ್ತಕ ರಚನೆಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 1947ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿಯೂ ಭಾಗವಹಿಸಿದ್ದರು.

ಮಹಾದೇವ ಶಂಕನಪುರ: ಮಹಾದೇವ ಶಂಕನಪುರ ಚಾಮರಾಜನಗರದ ಇವರು ಇತಿಹಾಸ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಾ, ಇತಿಹಾಸ-ಸಂಸ್ಕøತಿ-ಜಾನಪದ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಸಾಹಿತ್ಯ ಪ್ರಕಾರವನ್ನು ಕಂಡುಕೊಂಡವರು. ಮಾರಿಹಬ್ಬಗಳು, ಚಿಕ್ಕಲ್ಲೂರು ಜಾತ್ರೆ, ಮಲೆಯ ಮಾದಯ್ಯನ ಸಾಂಸ್ಕøತಿಕ ಜಾತ್ರೆ, ಮಂಟೇಸ್ವಾಮಿ ಮೌಖಿಕ ಚರಿತ್ರೆ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಆರ್.ಬಿ.ನಾಯ್ಕ್: ಕೆಪಿಟಿಸಿಎಲ್‍ನ ನಿವೃತ್ತ ಅಧಿಕಾರಿ ಹಾಗೂ ಕರ್ನಾಟಕ ಬಂಜಾರ ನೌಕರರ ಸಾಂಸ್ಕøತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘದ ಸಾಂಸ್ಕೃತಿಕ ರಾಯಭಾರಿ ಆರ್.ಬಿ.ನಾಯ್ಕ್ ಅವರಿಗೆ ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ದೇವರಾಜ್:ರಂಗಭೂಮಿ ಹಿನ್ನೆಲೆಯನ್ನು ಹೊಂದಿದ್ದ ದೇವರಾಜ್, ಕನ್ನಡ ಚಲನಚಿತ್ರ ರಂಗದಲ್ಲಿ ಡೈನಾಮಿಕ್ ಹೀರೊ ಎಂದು ಪ್ರಸಿದ್ಧಿ ಹೊಂದಿದವರು. 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, 1987ರಲ್ಲಿ ತೆರೆಕಂಡ ಅಗಂತುಕ ಚಿತ್ರದ ನಟನೆಗಾಗಿ ಅತ್ಯುತ್ತಮ ಸಹಾಯಕ ನಟ ರಾಜ್ಯ ಪ್ರಶಸ್ತಿ ಹಾಗೂ 1991ರಲ್ಲಿ ತೆರೆ ಕಂಡ ವೀರಪ್ಪನ್ ಪ್ರಶಸ್ತಿಗಾಗಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಗೆ ಭಾಜರಾಗಿದ್ದಾರೆ. ಆರಂಭದ ಚಿತ್ರಗಳಲ್ಲಿ ಖಳ ನಟನ ಪಾತ್ರವನ್ನು ಮಾಡುತ್ತಿದ್ದ ದೇವರಾಜ್, ಆನಂತರ ನಾಯಕ ನಟಗಾಗಿ, ಪೋಷಕ ನಟಗಾಗಿ ತಮ್ಮ ಅಭಿನಯದ ಮೂಲಕ ಚಿತ್ರ ರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕಾಶ್ ಬೆಳವಾಡಿ:ರಂಗಭೂಮಿ, ಸಿನಿಮಾ, ಕಿರುತೆರೆ ಕಲಾವಿದ, ಪತ್ರಕರ್ತ, ಶಿಕ್ಷಕ ಹೀಗೆ ಬಹುಮುಖ ಪ್ರತಿಭೆಯಾಗಿರುವ ಪ್ರಕಾಶ್ ಬೆಳವಾಡಿ, ಕನ್ನಡ, ಹಿಂದಿ, ತಮಿಳು ಸೇರಿದಂತೆ ಬಹುಭಾಷೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್‍ನಲ್ಲಿ ಸುಮಾರು 62 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬೆಂಗಳೂರಿನ ಸೆಂಟರ್ ಫಾರ್ ಫಿಲ್ಮ್ ಅಂಡ್ ಡ್ರಾಮಾದ ಸಹ ಸಂಸ್ಥಾಪಕರು. ಯುವ ಪೀಳಿಗೆಗೆ ಚಿತ್ರ ನಿರ್ಮಾಣದಲ್ಲಿ ತರಬೇತಿ ನೀಡಲು ಸುಚಿತ್ರಾ ಫಿಲಂ ಸ್ಕೂಲ್ ಆಫ್ ಆಟ್ರ್ಸ್ ಸ್ಥಾಪಿಸಿದ್ದಾರೆ. 2002 ರಲ್ಲಿ ಇವರು ನಿರ್ದೇಶಿಸಿದ ಮೊದಲ ಚಿತ್ರ `ಸ್ಟಂಬಲ್’ ರಾಷ್ಟ್ರಪ್ರಶಸ್ತಿ ಪಡೆಯಿತು. ಇವರು ಹಲವು ಭಾಷೆಗಳಲ್ಲಿ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪನವರ ಮಹೋನ್ನತ ಕೃತಿ `ಪರ್ವ’ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿ, `ಪರ್ವ’ನಾಟಕ ನಿರ್ದೇಶಿಸಿದ್ದಾರೆ.

ಅದಮ್ಯ ಚೇತನ:ಕೇಂದ್ರ ಮಾಜಿ ಸಚಿವ ಅನಂತಕುಮಾರ್ ಆರಂಭಿಸಿದ ಅದಮ್ಯ ಚೇತನ ಸಂಸ್ಥೆಯು ಶಾಲಾ ಮಕ್ಕಳಿಗೆ ಬಿಸಿಯೂಟ ಪೂರೈಸುತ್ತಿದೆ. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಮ್ಮ ಸಂಸ್ಥೆಯ ಮೂಲಕ ನೆರವು ನೀಡುತ್ತಿದೆ. ಬೆಂಗಳೂರು ಜಿಲ್ಲೆಯಲ್ಲೆ 300ಕ್ಕೂ ಹೆಚ್ಚು ಶಾಲೆಗಳ ಸುಮಾರು 72 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿದಿನ ಮಧ್ಯಾಹ್ನದ ಬಿಸಿಯೂಟ ವಿತರಿಸುವ ಜೊತೆಗೆ, ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿಯೂ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಅನಂತಕುಮಾರ್ ನಿಧನ ನಂತರ ಅವರ ಪತ್ನಿ ತೇಜಸ್ವಿನಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಬನಶಂಕರಿ ಮಹಿಳಾ ಸಮಾಜ:ಅನಾಥಾಶ್ರಮ, ವೃದ್ಧಾಶ್ರಮ ಸೇರಿದಂತೆ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಬನಶಂಕರಿ ಮಹಿಳಾ ಸಮಾಜವು ಬೆಂಗಳೂರಿನಲ್ಲಿ ಸುಮಾರು 48 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಯಲ್ಲಿ ಸುಮಾರು 1500ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿಯೂ ನಡೆಸಿದ ಸೇವಾ ಕಾರ್ಯ ಅನುಕರಣೀಯವಾದದ್ದು.

ವಿಕಲಚೇತನ ಕ್ರೀಡಾಪಟು ಗೋಪಿನಾಥ್:ಪ್ಯಾರಾ ಒಲಿಂಪಿಕ್ಸ್ ಕ್ರೀಡೆಯಲ್ಲಿ ರಾಷ್ಟ್ರೀಯ ಹಾಗೂ ಅಂತರ್‍ರಾಷ್ಟ್ರೀಯ ಸಾಧನೆ ಮಾಡಿರುವ ಬೆಂಗಳೂರಿನ ಕೆ.ಗೋಪಿನಾಥ್ ವಿಕಲಚೇತನ ಕ್ರೀಡಾಪಟು. 2003 ರಿಂದ ಭಾರತವನ್ನು ಪ್ರತಿನಿಧಿಸುತ್ತಿರುವ ಗೋಪಿನಾಥ್ ಪ್ಯಾರಾ ಬ್ಯಾಂಡ್ಮಿಂಟನ್, ಡಿಸ್ಕ್ ಥ್ರೋ ಹಾಗೂ ಶಾಟ್ ಪುಟ್ ಆಡಿ ಚಿನ್ನದ ಪದಕ ಹಾಗೂ ಕಂಚಿನ ಪದಕಗಳನ್ನು ಪಡೆದಿದ್ದಾರೆ. ಹಾಂಕಾಂಗ್, ಚೀನಾ, ಮಲೇಶಿಯಾ, ಇಸ್ರೇಲ್,ಜರ್ಮನಿ,ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾಗಳಲ್ಲಿ ನಡೆದ ಪ್ಯಾರಾಲಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ. 

ರೋಹನ್ ಬೋಪಣ್ಣ:ಭಾರತದ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಮೊಟ್ಟ ಮೊದಲ ಬಾರಿಗೆ 2002 ರಲ್ಲಿ ಇವರು ಭಾರತವನ್ನು ಪ್ರತಿನಿಧಿಸಿ ಗೆಲುವು ಸಾಧಿಸಿದ್ದರು. 2018 ರಲ್ಲಿ ಇವರಿಗೆ ಕ್ರೀಡಾಪಟುಗಳಿಗೆ ಕೊಡಮಾಡುವ `ಅರ್ಜುನ ಪ್ರಶಸ್ತಿಯನ್ನು ನೀಡಲಾಗಿದೆ. ಪುರುಷರ ಡಬಲ್ಸ್ ಪಂದ್ಯದಲ್ಲಿ ಕತಾರ್ ಹಾಗೂ ಮಹಾರಾಷ್ಟ್ರ ಮತ್ತು ಕೆನಡಾ ಓಪನ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಏಷ್ಯನ್ ಗೇಮ್ಸ್ 2018 ರಲ್ಲಿ ಚಿನ್ನದಪದಕ ಗಳಿಸಿದ್ದಾರೆ. ಕರ್ನಾಟಕ ಸರಕಾರದಿಂದ 2005 ರಲ್ಲಿ `ಏಕಲವ್ಯ ಪ್ರಶಸ್ತಿ’ ದೊರೆತಿದೆ.

ಸೂಲಗಿತ್ತಿ ಯಮನವ್ವ:ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಯಮನವ್ವ ಇಲ್ಲಿಯವರೆಗೂ ಸುಮಾರು 3 ಸಾವಿರ ಹೆರಿಗೆ ಮಾಡಿಸಿದ್ದಾರೆ. ಅಲೆಮಾರಿ ಜನಾಂಗದ ಬಿಡಾರಗಳಲ್ಲಿ ಯಮನವ್ವ ಸೂಲಗಿತ್ತಿಯಾಗಿ ಹೆರಿಗೆ ಮಾಡಿಸಿ ಕಡುಬಡವರ ಪಾಲಿಗೆ ನೆರವಾಗಿದ್ದಾರೆ. ಜೀವನೋಪಾಯಕ್ಕಾಗಿ ಕೌದಿ ಹೊಲೆಯುವ ಕಲೆಯನ್ನು ಕಲಿತುಕೊಂಡಿದ್ದಾರೆ.

ಸುಲ್ತಾನ್ ಬಿ. ಜಗಳೂರು:ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಸುಲ್ತಾನ್ ಬಿ. ನಾಟಿ ಔಷಧಿ ಕೊಡುವುದರಲ್ಲಿ ಪ್ರಸಿದ್ಧಿಯಾಗಿದ್ದಾರೆ. ಚರ್ಮ ರೋಗ, ಹುಳುಕಡ್ಡಿ ಮತ್ತು ಇಸುಬಿಗೆ ಔಷಧಿ ತಯಾರಿಸಿ ಚಿಕಿತ್ಸೆ ನೀಡುವ ಅವರು, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಖ್ಯಾತಿ ಪಡೆದಿದ್ದಾರೆ.

ಮುನಿಯಪ್ಪ:ಬೆಂಗಳೂರಿನ ದೊಮ್ಮಲೂರು ನಿವಾಸಿ ಮುನಿಯಪ್ಪ ಅನಾಥಶವಗಳ ಪಾಲಿಗೆ ಬಂಧು. ಈವರೆಗೆ ಸಾವಿರಾರು ಅನಾಥ ಶವಗಳಿಗೆ ಅಂತ್ಯಕ್ರಿಯೆಯನ್ನು ನಡೆಸಿರುವ ಮುನಿಯಪ್ಪ, ಸ್ಮಶಾನ ಮುನಿಯಪ್ಪ ಎಂದೇ ಚಿರಪರಿಚಿತರಾಗಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X