ಕೊಡಗಿನ ರೋಹನ್ ಬೋಪಣ್ಣಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ

ಮಡಿಕೇರಿ ಅ.31 : ಕೊಡಗಿನ ಹೆಮ್ಮೆಯ ಟೆನ್ನಿಸ್ ತಾರೆ ರೋಹನ್ ಬೋಪಣ್ಣ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಅರ್ಜುನ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ ಪಡೆದಿರುವ ಕೊಡಗಿನ ಮಾದಾಪುರ ಮೂಲದ ರೋಹನ್ ಬೋಪಣ್ಣ ಅವರಿಗೆ ಕನ್ನಡ ನಾಡಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.
ಮಾದಾಪುರ ಟೆನ್ನಿಸ್ ಕ್ಲಬ್ ನಲ್ಲಿ ಮೊದಲು ಟೆನ್ನಿಸ್ ಆಡಿದ ರೋಹನ್ ಇದೀಗ ಭಾರತದ ಪ್ರಮುಖ ಟೆನ್ನಿಸ್ ಆಟಗಾರ ಎನಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಆಟಗಾರ ಎಂಬ ಹಿರಿಮೆ ಹೊಂದಿರುವ ಇವರಿಗೆ ಕೊಡಗಿನ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
Next Story





