ಕೂಳೂರು: ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ; ಮುಂದುವರಿದ ಶೋಧ ಕಾರ್ಯ
ಮಂಗಳೂರು, ಅ.31: ನಗರದ ಹೊರ ವಲಯದ ಕೂಳೂರು ಸೇತುವೆಯಿಂದ ವ್ಯಕ್ತಿಯೋರ್ವ ನದಿಗೆ ಹಾರಿದ ಘಟನೆ ರವಿವಾರ ನಡೆದಿದೆ.
ಸೇತುವೆಯ ತಡೆಗೋಡೆ ಏರಿ ಸುಮಾರು 45 ವರ್ಷದ ಕೆಂಪು ಅಂಗಿ ಧರಿಸಿದ ವ್ಯಕ್ತಿಯೋರ್ವ ನದಿಗೆ ಹಾರುತ್ತಿರುವುದನ್ನು ವಾಹನ ಸವಾರರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನದಿಗೆ ಹಾರಿದ ವ್ಯಕ್ತಿಗಾಗಿ ಅಗ್ನಿಶಾಮಕದಳ ಹಾಗೂ ಪೊಲೀಸ್ ಇಲಾಖೆ ಶೋಧ ಕಾರ್ಯ ಮುಂದುವರಿಸಿದೆ. ಸಂಜೆಯವರೆಗೂ ಯಾವುದೇ ವ್ಯಕ್ತಿ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Next Story





