ಟಿಎಲ್ ಪಿ ಸಂಘಟನೆಯ ಚಳವಳಿಯಿಂದ ಪಾಕಿಸ್ತಾನಕ್ಕೆ 35 ಬಿಲಿಯನ್ ರೂ. ನಷ್ಟ

ಇಸ್ಲಮಾಬಾದ್, ಅ.31: ತೆಹ್ರೀಕಿ ಲಬ್ಬಾಯಿಕ್ ಪಾಕಿಸ್ತಾನ(ಟಿಎಲ್‌ಪಿ) ಸಂಘಟನೆ 2017ರಿಂದ ನಡೆಸುತ್ತಿರುವ ಚಳವಳಿಯಿಂದ ಪಾಕಿಸ್ತಾನಕ್ಕೆ ತೀವ್ರ ಹಾನಿಯಾಗಿದ್ದು ದೇಶದ ಅರ್ಥವ್ಯವಸ್ಥೆಗೆ 35 ಬಿಲಿಯನ್ ರೂ.ಗಳಷ್ಟು ನಷ್ಟವಾಗಿದೆ ಎಂದು ಪಾಕಿಸ್ತಾನ ಅಧಿಕಾರಿ ಹಸನ್ ಖವರ್ ಹೇಳಿದ್ದಾರೆ.
ಟಿಎಲ್‌ಪಿಯ ಪ್ರತಿಭಟನೆ ಮುಂದುವರಿದಿದ್ದು ರಸ್ತೆ ತಡೆ ನಡೆಸುತ್ತಿರುವುದರಿಂದ ದೇಶಕ್ಕೆ ಈಗಾಗಲೇ ಸುಮಾರು 4 ಬಿಲಿಯನ್ ರೂ. ನಷ್ಟವಾಗಿದೆ. ಜೊತೆಗೆ, ಪ್ರತಿಭಟನೆ ಸಂದರ್ಭ ಆಸ್ತಿಪಾಸ್ತಿಗೆ ಹಾನಿ, ವ್ಯಾಪಾರ ವಹಿವಾಟಿಗೆ ಧಕ್ಕೆಯಾಗಿರುವುದರಿಂದ ಸುಮಾರು 35 ಬಿಲಿಯನ್ ರೂ. ನಷ್ಟ ಅರ್ಥವ್ಯವಸ್ಥೆಯ ಮೇಲಾಗಿದೆ. ಮಾರುಕಟ್ಟೆಗೆ ಹಣ್ಣು ಮತ್ತು ತರಕಾರಿ ಪೂರೈಕೆ ಸ್ಥಗಿತವಾಗಿದೆ. ಆಹಾರ ವಸ್ತುಗಳು ಲಾರಿಯಲ್ಲೇ ವ್ಯರ್ಥವಾಗುತ್ತಿದೆ ಎಂದು ಲಾಹೋರ್ ಮುಖ್ಯಮಂತ್ರಿಯ ವಿಶೇಷ ಸಹಾಯಕ ಅಧಿಕಾರಿ ಹಸನ್ ಖವರ್ ಮಾಹಿತಿ ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Next Story





